ನವದೆಹಲಿ: ಹೊಸ ಕೃಷಿ ಕಾನೂನುಗಳ ಬಗ್ಗೆ ಪ್ರಧಾನ ಮಂತ್ರಿ ರೈತರಿಗೆ ಪದೇ ಪದೇ ಸುಳ್ಳು ಹೇಳುತ್ತಿದ್ದಾರೆ. ರೈತರ ಹೋರಾಟವನ್ನು ವಿರೋಧ ಪಕ್ಷಗಳು ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ ಎಂಬ ಅವರ ಆಧಾರ ರಹಿತ ಆರೋಪದ ವಿರುದ್ಧ ನಾವು ಶಕ್ತವಾದ ಪ್ರತಿಭಟನೆ ಮಾಡುತ್ತೇವೆ ಎಂದು ಪ್ರತಿಪಕ್ಷಗಳು ಜಂಟಿ ಹೇಳಿಕೆ ನೀಡಿವೆ.
ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿಯನ್ನು ಮುಂದುವರೆಸಿರುವ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರಾಹುಲ್ ಗಾಂಧಿ ರೈತರ ಬಗ್ಗೆ ಭಾರಿ ಚಿಂತಿತರಾಗಿದ್ದಾರೆ. ಅವರಿಗೆ ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ರೈತರಿಗಾಗಿ ಏನಾದರು ಮಾಡಬಹುದಿತ್ತು. ಆದರೆ, ಕಾಂಗ್ರೆಸ್ನದ್ದು ಯಾವಾಗಲು ರೈತ ವಿರೋಧಿ ನಿಲುವಾಗಿದೆ ಎಂದು ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿದ್ದಾರೆ. ಇದೇ ವೇಳೆ ರಾಹುಲ್ ರಾಷ್ಟ್ರಪತಿ ಭೇಟಿಯಾಗಿರುವ ಬಗ್ಗೆಯೂ ಟೀಕೆ ಮಾಡಿದ್ದಾರೆ.
ಓದಿ : ತನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದ ಮಮತಾ: ಆರೋಪ ನಿರಾಕರಿಸಿದ ವಿಶ್ವ ಭಾರತಿ
ರಾಹುಲ್ ಗಾಂಧಿ ವಯನಾಡ್ ಸಂಸದ, ಕೇರಳದಲ್ಲಿ ಎಪಿಎಂಸಿ ಕಾಯ್ದೆ ಇದೆಯ..? ಇಲ್ಲಾ ಎಂದಾದರೆ ರಾಹುಲ್ ಗಾಂಧಿ ಅಲ್ಲಿನ ರೈತರಿಗಾಗಿ ಯಾಕೆ ಹೋರಾಟ ಮಾಡಬಾರದು..? ಅವರು ಎಲ್ಲಿ ಯಾವ ಉದ್ದೇಶಕ್ಕೆ ರೈತರನ್ನು ಬೆಂಬಲಿಸುತ್ತಿದ್ದಾರೆ ಎಂಬುವುದನ್ನು ಸ್ಷಷ್ಟಪಡಿಸಿಬೇಕು ಎಂದು ಬಿಜೆಪಿ ಸಂಸದ ಡಾ.ಸುಧಾಂಶು ತ್ರಿವೇದಿ ಹೇಳಿದ್ದಾರೆ.
ಈ ನಡುವೆ, ಬಿಜೆಪಿಯ ಗೂಂಡಾಗಳು ದೆಹಲಿ ಜಲ ಮಂಡಳಿ ಕಚೇರಿಗೆ ನುಗ್ಗಿ ಕಚೇರಿಯನ್ನು ಧ್ವಂಸ ಮಾಡಿ, ಸಿಎಂ ಕೇಜ್ರಿವಾಲ್ ರೈತರ ಪರ ಮಾತನಾಡುವುದು ಮತ್ತು ಬೆಂಬಲ ನೀಡುವುದರ ವಿರುದ್ಧ ನನಗೆ ಎಚ್ಚರಿಕೆ ನೀಡಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯ ಇದೆ ಎಂದು ಆಮ್ ಆದ್ಮಿಯ ರಾಘವ್ ಚಾಧಾ ಆರೋಪಿಸಿದ್ದಾರೆ.