ಲೋನಿ (ಉತ್ತರ ಪ್ರದೇಶ ) : ಲಾಕ್ ಡೌನ್ ನಡುವೆ ಬಿಜೆಪಿ ಶಾಸಕ ನಂದ ಕಿಶೋರ್ ಗುರ್ಜರ್ ತಮ್ಮ ಕ್ಷೇತ್ರದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.
ಲೋನಿ ಪ್ರದೇಶದಲ್ಲಿ ಹೆಚ್ಚಾಗಿ ರೈತರು ಗೋಧಿ ಬೆಳೆ ಬೆಳೆಯತ್ತಿದ್ದು, ಸರಿಯಾದ ಸಮಯಕ್ಕೆ ಬೆಳೆ ಕೊಯ್ಲು ಮಾಡದಿದ್ದರೆ ದೊಡ್ಡ ನಷ್ಟ ಉಂಟಾಗಲಿದೆ. ಆದ್ದರಿಂದ, ರೈತರನ್ನು ಉತ್ತೇಜಿಸಲು ಶಾಸಕ ನಂದ ಕಿಶೋರ್ ಗೋಧಿ ಕಟಾವು ಕಾರ್ಯದಲ್ಲಿ ತೊಡಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬೆಳೆ ಕೊಯ್ಲು ಮಾಡುವಾಗ ಸಾಮಾನ್ಯವಾಗಿ ಸಾಮಾಜಿಕ ಅಂತರ ಉಂಟಾಗುತ್ತದೆ, ಇದು ಒಂದು ಉತ್ತಮ ಬೆಳವಣಿಗೆ. ಅಲ್ಲದೆ, ಕೃಷಿ ಚಟುವಟಿಕೆಗಳಿಗೆ ಲಾಕ್ ಡೌನ್ನಿಂದ ವಿನಾಯಿತಿ ನೀಡಿದ್ದರಿಂದ ರೈತರಿಗೆ ಪೊಲೀಸರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದಿದ್ದಾರೆ.