ನವದೆಹಲಿ: ಕೊರೊನಾ ವಿರುದ್ಧ ಹೋರಾಟ ನಡೆಸಿರುವ ಭಾರತ 21 ದಿನಗಳ ಲಾಕ್ಡೌನ್ ಘೋಷಣೆ ಮಾಡಿ ಆದೇಶ ಹೊರಡಿಸಿದೆ. ಕೆಲವೊಂದು ಪ್ರದೇಶಗಳಲ್ಲಿ ಕೇಂದ್ರದ ಆದೇಶ ಧಿಕ್ಕರಿಸಿ ಪೊಲೀಸರ ಮೇಲೆ ಹಲ್ಲೆ ನಡೆಸಿರುವಂತಹ ಸ್ಥಿತಿ ನಿರ್ಮಾಣಗೊಂಡಿದೆ.
ಜನರ ವರ್ತನೆ ವಿರುದ್ಧ ಆಕ್ರೋಶಗೊಂಡಿರುವ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಟ್ವಿಟ್ಟರ್ ಮೂಲಕ ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದು, ಎಚ್ಚರಗೊಳ್ಳಿ, ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 21 ದಿನಗಳ ಲಾಕ್ಡೌನ್ ಆದೇಶ ಗಂಭೀರವಾಗಿ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ.
-
Please wake up to the reality and seriousness of the situation and take responsibility. The nation needs our support and honesty. pic.twitter.com/ZvOb0qgwIV
— Virat Kohli (@imVkohli) March 27, 2020 " class="align-text-top noRightClick twitterSection" data="
">Please wake up to the reality and seriousness of the situation and take responsibility. The nation needs our support and honesty. pic.twitter.com/ZvOb0qgwIV
— Virat Kohli (@imVkohli) March 27, 2020Please wake up to the reality and seriousness of the situation and take responsibility. The nation needs our support and honesty. pic.twitter.com/ZvOb0qgwIV
— Virat Kohli (@imVkohli) March 27, 2020
ಹಲೋ ನಾನು ವಿರಾಟ್ ಕೊಹ್ಲಿ, ಇದು ನಾನು ಇಂಡಿಯನ್ ಪ್ಲೇಯರ್ ಆಗಿ ಅಲ್ಲ ಬದಲಿಗೆ ದೇಶದ ನಾಗರಿಕನಾಗಿ ಮಾತನಾಡುತ್ತಿದ್ದೇನೆ. ಕಳೆದ ಕೆಲ ದಿನಗಳಿಂದ ಜನರು ಗುಂಪು-ಗುಂಪುಗಳಾಗಿ ತೆರಳುತ್ತಿರುವುದನ್ನ ನಾನು ನೋಡಿದ್ದೇನೆ. ದೇಶದಲ್ಲಿನ ಲಾಕ್ಡೌನ್ ಆದೇಶ ಪಾಲನೆಯಾಗುತ್ತಿಲ್ಲ. ಕೊರೊನಾ ವಿರುದ್ಧದ ನಮ್ಮ ಹೋರಾಟ ತುಂಬಾ ಕಳಪೆ ಮಟ್ಟದಿಂದ ಕೂಡಿರುವ ಕಾರಣ, ಎಚ್ಚರಗೊಳ್ಳಿ, 21 ದಿನಗಳ ಲಾಕ್ಡೌನ್ ಗಂಭೀರವಾಗಿ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಕೇಂದ್ರ ಸರ್ಕಾರ ನೀಡಿರುವ ಆದೇಶ ಪಾಲನೆ ಮಾಡಿ. ನಿಮ್ಮ ನಿರ್ಲಕ್ಷ್ಯತ ಇನ್ನೊಬ್ಬರ ಅನಾರೋಗ್ಯ ಅಥವಾ ವೈರಸ್ ಹರಡಲು ಕಾರಣವಾಗಬಹುದು ಎಂದು ಕೊಹ್ಲಿ ಮನವಿ ಮಾಡಿಕೊಂಡಿದ್ದು, ಕೇಂದ್ರ ತೆಗೆದುಕೊಂಡಿರುವ ನಿರ್ಧಾರ ತಪ್ಪದೇ ಪಾಲನೆ ಮಾಡಿದಾಗ ಮಾತ್ರ ಆರೋಗ್ಯವಂತ ದೇಶ ಕಟ್ಟಲು ಸಾಧ್ಯ ಎಂದು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ. ದೇಶದಲ್ಲಿ 21 ದಿನಗಳ ಲಾಕ್ಡೌನ್ ನಿರ್ಧಾರ ಸ್ವಾಗತ ಮಾಡಿರುವ ವಿರಾಟ್ ಕೊಹ್ಲಿ ತುರ್ತು ಸಂದರ್ಭ ಹೊರತುಪಡಿಸಿ ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರಬೇಡಿ ಎಂದಿದ್ದಾರೆ.