ETV Bharat / bharat

ಪ್ರೇಮಸೌಧ ತಾಜ್​ಮಹಲ್​ಗೆ​ ಭೇಟಿ ನೀಡಲಿದ್ದಾರೆ ಟ್ರಂಪ್​ ದಂಪತಿ! - trumps india tour

ಫೆ. 24 ರಂದು ಟ್ರಂಪ್​ ತಮ್ಮ ಪತ್ನಿ ಮೆಲಾನಿಯಾ ಅವರೊಂದಿಗೆ ಭಾರತಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಉತ್ತರ ಪ್ರದೇಶದ ಆಗ್ರಾದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ತಾಜ್ ಮಹಲ್‌ಗೆ ಭೇಟಿ ನೀಡಲಿದ್ದಾರೆ.

US President Donald Trump may visit Taj Mahal during India trip
ತಾಜ್​ಮಹಲ್​ ಭೇಟಿ ನೀಡಲಿದ್ದಾರೆ ಟ್ರಂಪ್​ ದಂಪತಿ!
author img

By

Published : Feb 16, 2020, 10:51 AM IST

ಆಗ್ರಾ (ಉತ್ತರ ಪ್ರದೇಶ): ಭಾರತಕ್ಕೆ ಆಗಮಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಪ್ರವಾಸದ ಸಂದರ್ಭದಲ್ಲಿ ಉತ್ತರಪ್ರದೇಶದ ಆಗ್ರಾದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ತಾಜ್ ಮಹಲ್‌ಗೆ ಭೇಟಿ ನೀಡಲಿದ್ದಾರೆ.

ಫೆ. 24 ರಂದು ಟ್ರಂಪ್​ ತಮ್ಮ ಪತ್ನಿ ಮೆಲಾನಿಯಾ ಅವರೊಂದಿಗೆ ಭಾರತಕ್ಕೆ ಆಗಮಿಸಲಿದ್ದಾರೆ. ಅಂದೇ ಅಹಮದಾಬಾದ್​ನಿಂದ ಆಗ್ರಾಕ್ಕೆ ತೆರಳಲು ನಿರ್ಧರಿಸಿದ್ದಾರೆ.

ಈ ಹಿನ್ನೆಲೆ ಜಿಲ್ಲಾಡಳಿತದ ಅಧಿಕಾರಿಗಳು, ಎಡಿಜಿ ಅಜಯ್ ಆನಂದ್, ಡಿಎಂ ಪ್ರಭು ನಾರಾಯಣ್ ಸಿಂಗ್, ಮತ್ತು ಎಸ್‌ಎಸ್‌ಪಿ ಬಾಬ್ಲು ಕುಮಾರ್ ಸೇರಿ ವಿವಿಧ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ನಡೆಸಿ ಭದ್ರತೆ ಕುರಿತು ಚರ್ಚಿಸಿದ್ದಾರೆ.

ಟ್ರಂಪ್ ಅವರು ನಮ್ಮ ದೊಡ್ಡ ಅತಿಥಿ, ಅವರನ್ನು ಗೌರವಯುತವಾಗಿ ಸ್ವಾಗತಿಸಲಾಗುವುದು ಎಂದು ಡಿಎಂ ಪ್ರಭು ನಾರಾಯಣ್ ಸಿಂಗ್ ತಿಳಿಸಿದ್ದಾರೆ. ಇನ್ನೂ ಭದ್ರತಾ ಪರಿಶೀಲನೆ ನಡೆಸಲು ಅಮೆರಿಕದ ತಂಡವು ಮುಂಗಡವಾಗಿ ಫೆಬ್ರವರಿ 17 ರಂದು ಆಗ್ರಾಕ್ಕೆ ಆಗಮಿಸಲಿದೆ. ಭದ್ರತಾ ವ್ಯವಸ್ಥೆ ದೃಷ್ಟಿಯಿಂದ ಫೆಬ್ರವರಿ 18 ರಂದು ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಸಭೆ ನಡೆಸಲಿದ್ದಾರೆ.

ತಾಜ್‌ಮಹಲ್‌ಗೆ ಭೇಟಿ ನೀಡುವುದರ ಜೊತಗೆ, ಷಹಜಹಾನ್ ಮತ್ತು ಮುಮ್ತಾಜ್ ಮಹಲ್ ಕುರಿತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಅವರು ವೀಕ್ಷಿಸುವ ಸಾಧ್ಯತೆಯಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.