ಕೆನ್ನೆವಿಕ್(ಅಮೆರಿಕ): ಬೇರೊಬ್ಬರ ಅಂಗಡಿಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಕಳ್ಳನಿಗೆ ಕರ್ಮಫಲ ತಟ್ಟಿದೆ. ಶಾಪಿಂಗ್ ನೆಪದಲ್ಲಿ ರಸ್ತೆಯಲ್ಲಿದ್ದ ಅಂಗಡಿಗಳಿಗೆ ನುಗ್ಗಿದ ಆತ ಕಳ್ಳತನ ಮಾಡುತ್ತಿದ್ದ. ತನ್ನ ಕೃತ್ಯ ಎಸಗಿ ಹೊರಬರುತ್ತಿದ್ದಂತೆ ಆತನ ವಾಹನವನ್ನೇ ಇನ್ನೊಬ್ಬ ಕಳ್ಳ ಲಪಟಾಯಿಸಿದ ಪ್ರಕರಣ ನಡೆದಿದೆ. ಇಷ್ಟಕ್ಕೂ ಈ ಘಟನೆ ನಡೆದಿದ್ದು ಹೇಗೆ ಗೊತ್ತೇ?
ಈ ಘಟನೆ ಇಲ್ಲಿನ ಕೆನ್ನೆವಿಕ್ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಭಾನುವಾರ ಸಂಜೆ ಸುಮಾರು 6 ಗಂಟೆಗೆ ಪ್ರಕರಣ ನಡೆದಿರುವುದಾಗಿ ಅಲ್ಲಿನ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ವಿಲಿಯಮ್ ಕೆಲ್ಲೆ ಎಂಬಾತ, ತನ್ನ ಕೆಂಪು ಬಣ್ಣದ ಚೆವಿ ಪಿಕ್ ಅಪ್ ಟ್ರಕ್ ಕಳ್ಳತನವಾಗಿದೆ. ತಾನು ಟ್ರಕ್ ಕೀಯನ್ನು ಸೀಟಿನಲ್ಲಿ ಬಿಟ್ಟು ಬಂದಿದ್ದೆ. ಈ ವೇಳೆ, ಒಬ್ಬಾತ ಬೈಕ್‌ನಲ್ಲಿ ಬಂದಿದ್ದು, ತನ್ನ ಬೈಕ್‌ನ್ನು ತಾನು ನಿಲ್ಲಿಸಿದ್ದ ಟ್ರಕ್‌ನೊಳಗೆ ತುಂಬಿ ಎಸ್ಕೇಪ್ ಆಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ.
ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಅವರು ಘಟನಾ ಸ್ಥಳದ ಸಿಸಿಟಿವಿ ದ್ಯಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಆಗ ಅಸಲಿ ವಿಚಾರ ಬಹಿರಂಗವಾಗಿದೆ. ಕೆಲ್ಲಿ ತನ್ನ ಟ್ರಕ್ ನಿಲ್ಲಿಸಿ ಸಮೀಪದ ರಸ್ತೆಯಲ್ಲಿದ್ದ ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿದ್ದ ಅಂಶ ಬೆಳಕಿಗೆ ಬಂದಿದೆ. ಈ ವಿಚಾರವನ್ನು ಆತ ಪೊಲೀಸರಲ್ಲೂ ಒಪ್ಪಿಕೊಂಡಿದ್ದ.
ಹಾಗಾಗಿ, ಈ ಸಾಮಾಜಿಕ ಜಾಲತಾಣಗಳಲ್ಲಿ ಈ ಸ್ಟೋರಿ ಓದಿರುವ ನೆಟ್ಟಿಗರು ಇದೆಲ್ಲಾ ಕರ್ಮಫಲ, ಮಾಡಿದ್ದುಣ್ಣೋ ಮಹರಾಯ, ಜಗತ್ತಿನಲ್ಲೇ ಅತ್ಯಂತ ವೇಗದ ಕರ್ಮಫಲ ಅಂತೆಲ್ಲಾ ವ್ಯಂಗ್ಯ ಮಾಡುತ್ತಿದ್ದಾರೆ.