ETV Bharat / bharat

ಯುಪಿಎಸ್​​ಸಿ ಫಲಿತಾಂಶ ಪ್ರಕಟ... ಪ್ರದೀಪ್​ ಸಿಂಗ್​, ಪ್ರತಿಭಾ ವರ್ಮಾ ಟಾಪರ್​

2019ರ ಸಾಲಿನ ಯುಪಿಎಸ್​ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಪ್ರದೀಪ್ ಸಿಂಗ್ ಪ್ರಥಮ ಸ್ಥಾನ ಪಡೆದಿದ್ದಾರೆ.

UPSC announces results for Civil Services Exam
ಯುಪಿಎಸ್​ಸಿ ಪರೀಕ್ಷಾ ಫಲಿತಾಂಶ ಪ್ರಕಟ
author img

By

Published : Aug 4, 2020, 12:43 PM IST

Updated : Aug 4, 2020, 2:43 PM IST

ನವದೆಹಲಿ: ನವದೆಹಲಿ: 2019ನೇ ಸಾಲಿನ ಕೇಂದ್ರ ನಾಗರಿಕ ಸೇವಾ ಪರೀಕ್ಷೆಗಳ ಅಂತಿಮ ಫಲಿತಾಂಶ ಕೇಂದ್ರ ಸಾರ್ವಜನಿಕ ಸೇಔಆ ಆಯೋಗದಿಂದ ಪ್ರಕಟಗೊಂಡಿದೆ. ಪುರುಷರ ವಿಭಾಗದಲ್ಲಿ ಪ್ರದೀಪ್​ ಸಿಂಗ್​ ಟಾಪರ್​ ಆಗಿ ಹೊರಹೊಮ್ಮಿದ್ದು, ಮಹಿಳೆಯರ ಪೈಕಿ ಪ್ರತಿಭಾ ವರ್ಮಾ ಟಾಪರ್​ ಆಗಿ ಹೊರಹೊಮ್ಮಿದ್ದಾರೆ.

ಪ್ರದೀಪ್ ಸಿಂಗ್ ಪ್ರಥಮ ಸ್ಥಾನ ಪಡೆದರೆ, ಜತಿನ್ ಕಿಶೋರ್ ದ್ವಿತೀಯ ಮತ್ತು ಪ್ರತಿಭಾ ವರ್ಮಾ ತೃತೀಯ ಸ್ಥಾನ ಪಡೆದಿದ್ದಾರೆ. ಒಟ್ಟು 829 ಅಭ್ಯರ್ಥಿಗಳ ಹೆಸರನ್ನು ನೇಮಕಾತಿಗೆ ಶಿಫಾರಸು ಮಾಡಲಾಗಿದೆ. ಯುಪಿಎಸ್​ಸಿಯ ಅಧಿಕೃತ ವೆಬ್‌ಸೈಟ್ - www.upsc.gov.in ನಲ್ಲಿ ಫಲಿತಾಂಶ ಲಭ್ಯವಿದೆ.

ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ವಿದೇಶಿ ಸೇವೆ (ಐಎಫ್‌ಎಸ್), ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಸೇರಿದಂತೆ ದೇಶದ ಅತ್ಯುನ್ನತ ನಾಗರಿಕ ಸೇವೆಗಳಿಗೆ ಅಧಿಕಾರಿಗಳನ್ನು ಆಯ್ಕೆ ಮಾಡಲು ಪೂರ್ವಭಾವಿ, ಮುಖ್ಯ ಪರೀಕ್ಷೆ (ಮೇನ್ಸ್​) ಹಾಗೂ ಸಂದರ್ಶನ ಹೀಗೆ ವಾರ್ಷಿಕವಾಗಿ ಮೂರು ಹಂತಗಳಲ್ಲಿ ಯುಪಿಎಸ್​ಸಿ ಪರೀಕ್ಷೆ ನಡೆಸಲಾಗುತ್ತದೆ.

829 ಅಭ್ಯರ್ಥಿಗಳ ಪೈಕಿ ಸಾಮಾನ್ಯ ವರ್ಗ 304 ಅಭ್ಯರ್ಥಿಗಳು, ಆರ್ಥಿಕವಾಗಿ ಹಿಂದುಳಿದ ವರ್ಗ 78 ಅಭ್ಯರ್ಥಿಗಳು, ಹಿಂದುಳಿದ ವರ್ಗ 251 ಅಭ್ಯರ್ಥಿಗಳು, ಪರಿಶಿಷ್ಟ ಜಾತಿ 129 ಅಭ್ಯರ್ಥಿಗಳು, ಪರಿಶಿಷ್ಟ ಪಂಗಡ 67 ಅಭ್ಯರ್ಥಿಗಳಿದ್ದಾರೆ. 2020ರ ಯುಪಿಎಸ್​ಸಿ ಪರೀಕ್ಷೆ ಮೇ 31ರಂದು ನಡೆಯಬೇಕಾಗಿತ್ತು. ಆದರೆ ಕೊರೊನಾ ಕಾರಣ ಅಕ್ಟೋಬರ್​​ 4ಕ್ಕೆ ಮುಂದೂಡಿಕೆಯಾಗಿದೆ.

Last Updated : Aug 4, 2020, 2:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.