ಲಕ್ನೋ: ಉತ್ತರಪ್ರದೇಶದ 10ನೇ ತರಗತಿ ಹಾಗೂ 12 ನೇ ತರಗತಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಈ ಸಲವೂ ಹೆಣ್ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ.
12ನೇ ತರಗತಿಯಲ್ಲಿ ಶೇ 74.63ರಷ್ಟು ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದು, ಅನುರಾಗ್ ಮಲಿಕ್ 12ನೇ ತರಗತಿಯಲ್ಲಿ ಶೇ.97ರಷ್ಟು ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ಉಳಿದಂತೆ ಪ್ರಜ್ವಲ್ ಸಿಂಗ್ ಶೇ 96 ಹಾಗೂ ಉತ್ಕೃರ್ಷ ಶುಕ್ಲಾ ಶೇ.94.80ರಷ್ಟು ಅಂಕ ಪಡೆದು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
10ನೇ ತರಗತಿಯಲ್ಲಿ ರಿಯಾ ಜೈನ್ ಶೇ 96.67ರಷ್ಟು ಅಂಕ ಪಡೆದು ಟಾಪರ್ ಆಗಿದ್ದು, ಅಭಿಮನ್ಯು ವರ್ಮಾ 95.53ರಷ್ಟು ಅಂಕ ಪಡೆದು ಎರಡನೇ ಸ್ಥಾನ ಪಡೆದುಕೊಂಡಿದ್ದುಮ ಯೋಗೇಶ್ ಪ್ರತಾಪ್ ಸಿಂಗ್ 95.33 ಅಂಕ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.
ಈ ಸಲದ 10ನೇ ಹಾಗೂ 12ನೇ ತರಗತಿ ಪರೀಕ್ಷೆಯಲ್ಲಿ 56 ಲಕ್ಷ ವಿದ್ಯಾರ್ಥಿಗಳು ದಾಖಲಾಗಿದ್ದರು. ಇದರಲ್ಲಿ 30,24,632ರಷ್ಟು ವಿದ್ಯಾರ್ಥಿಗಳು 10ನೇ ತರಗತಿ ಹಾಗೂ 25,86,440 ರಷ್ಟು ವಿದ್ಯಾರ್ಥಿಗಳು 12ನೇ ತರಗತಿ ಪರೀಕ್ಷೆ ಬರೆದಿದ್ದರು.