ETV Bharat / bharat

ಮೋದಿ ಜನ್ಮದಿನದ ಅಂಗವಾಗಿ 'ಸೇವಾ ಸಪ್ತಾಹ' ಅಭಿಯಾನಕ್ಕೆ ನಡ್ಡಾ ಚಾಲನೆ - ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿಯ ಜನ್ಮದಿನದ ಅಂಗವಾಗಿ ಸೆಪ್ಟೆಂಬರ್ 14 ರಿಂದ 20ರ ವರೆಗೆ ಒಂದು ವಾರದ ಕಾಲ ಬಿಜೆಪಿ ಆಯೋಜಿಸಿರುವ 'ಸೇವಾ ಸಪ್ತಾಹ' ಅಭಿಯಾನಕ್ಕೆ ಪಕ್ಷದ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಚಾಲನೆ ನೀಡಿದರು.

UP BJP launches 'Seva Saptah'
'ಸೇವಾ ಸಪ್ತಾಹ' ಅಭಿಯಾನಕ್ಕೆ ಜೆ ಪಿ ನಡ್ಡಾ ಚಾಲನೆ
author img

By

Published : Sep 14, 2020, 3:51 PM IST

ನೋಯ್ಡಾ: ಸೆ.17 ರಂದು ಪ್ರಧಾನಿ ನರೇಂದ್ರ ಮೋದಿಯ ಜನ್ಮದಿನದ ಅಂಗವಾಗಿ ಬಿಜೆಪಿ ಆಯೋಜಿಸಿರುವ 'ಸೇವಾ ಸಪ್ತಾಹ' ಅಭಿಯಾನಕ್ಕೆ ಪಕ್ಷದ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಉತ್ತರ ಪ್ರದೇಶದ ಗೌತಮ ಬುದ್ಧ ನಗರದ ಚಾಪ್ರೌಲಿ ಗ್ರಾಮದಲ್ಲಿ ಚಾಲನೆ ನೀಡಿದರು.

ಪಿಎಂ ಮೋದಿಯ ಹುಟ್ಟು ಹಬ್ಬದ ಅಂಗವಾಗಿ ಸೆಪ್ಟೆಂಬರ್ 14 ರಿಂದ 20ರ ವರೆಗೆ ರಾಷ್ಟ್ರದಾದ್ಯಂತ ಪಕ್ಷದ ಮುಖಂಡರು ಒಂದು ವಾರದ ಅವಧಿಯ 'ಸೇವಾ ಸಪ್ತಾಹ' ಅಭಿಯಾನ ನಡೆಸಲು ನಿರ್ಧರಿಸಿದ್ದರು.

'ಸೇವಾ ಸಪ್ತಾಹ' ಅಭಿಯಾನಕ್ಕೆ ಜೆ ಪಿ ನಡ್ಡಾ ಚಾಲನೆ

ಪ್ರಧಾನಿ ನರೇಂದ್ರ ಮೋದಿ ಅವರು ಸೆ. 17 ರಂದು 70ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅವರ ಜೀವನ ಪ್ರಯಾಣದಲ್ಲಿ 'ಸೇವೆ' ಕೇಂದ್ರಬಿಂದುವಾಗಿದೆ. ಅವರು ತಮ್ಮ ಜೀವನವನ್ನು ಜನರ ಮತ್ತು ದೇಶದ ಸೇವೆಗೆ ಮುಡಿಪಾಗಿಟ್ಟಿದ್ದಾರೆ. ಹೀಗಾಗಿ ಈ ಒಂದು ವಾರವನ್ನು 'ಸೇವಾ ಸಪ್ತಾಹ'ವನ್ನಾಗಿ ಆಚರಿಸಲು ಬಿಜೆಪಿ ನಿರ್ಧರಿಸಿದೆ. ಈ ಅಭಿಯಾನದಲ್ಲಿ ಕೋಟ್ಯಂತರ ಬಿಜೆಪಿ ಕಾರ್ಯಕರ್ತರು ಜನರಿಗೆ ಸೇವೆ ಸಲ್ಲಿಸಲಿದ್ದಾರೆ " ಎಂದು ನಡ್ಡಾ ಹೇಳಿದರು.

'ಸೆವೆಂಟಿ' (70), ಈ ಸಪ್ತಾಹದ ವಿಷಯವಾಗಿದ್ದು, ಪ್ರತಿ ಜಿಲ್ಲೆಯ 70 ವಿಶೇಷ ಚೇತನರಿಗೆ ಕೃತಕ ಕೈಕಾಲುಗಳು ಮತ್ತು ಇತರ ಉಪಕರಣಗಳನ್ನು ನೀಡಲಾಗುತ್ತದೆ. ಕೋವಿಡ್ -19 ಮಾರ್ಗಸೂಚಿಗಳನ್ನು ಅನುಸರಿಸಿ 70 ಆಸ್ಪತ್ರೆಗಳಲ್ಲಿ ಮತ್ತು ಬಡಜನರು ವಾಸಿಸುವ ಪ್ರದೇಶಗಳಲ್ಲಿ ಹಣ್ಣುಗಳನ್ನು ವಿತರಿಸಲಾಗುತ್ತದೆ. 70 ಕೋವಿಡ್ ರೋಗಿಗಳಿಗೆ ಪ್ಲಾಸ್ಮಾ ದಾನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. 70 ದಿವ್ಯಾಂಗರಿಗೆ ಕನ್ನಡಕಗಳನ್ನು ನೀಡಲಾಗುತ್ತದೆ. ಹೀಗೆ ಇನ್ನಿತರ ಸಮಾಜ ಕಲ್ಯಾಣ ಚಟುವಟಿಕೆಗಳಲ್ಲಿ ಒಂದು ವಾರದ ಕಾಲ ಪಕ್ಷದ ನಾಯಕರು ತೊಡಗಿಸೊಕೊಳ್ಳಲಿದ್ದಾರೆ ಎಂದು ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.