ETV Bharat / bharat

ರೇಪ್ ಆರೋಪಿಗೆ ಜಾಮೀನು ಸಿಕ್ಕಿತೆಂದು ಬೆಂಕಿ ಹಚ್ಚಿಕೊಂಡಿದ್ದ ಸಂತ್ರಸ್ತೆ ಸಾವು - ರೇಪ್ ಆರೋಪಿಗೆ ಜಾಮೀನು ಸಿಕ್ಕಿತೆಂದು ಬೆಂಕಿ ಹಚ್ಚಿಕೊಂಡಿದ್ದ ಸಂತ್ರಸ್ತೆ ಸಾವು

ಅತ್ಯಾಚಾರ ಆರೋಪಿಗೆ ಹೈಕೋರ್ಟ್​ನಿಂದ ಜಾಮೀನು ಸಿಕ್ಕ ಹಿನ್ನೆಲೆ ಡಿ.16 ರಂದು ಉನ್ನಾವೋ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿ ಬೆಂಕಿ ಹಚ್ಚಿಕೊಂಡು, ಶೇ.70ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಸಂತ್ರಸ್ತ ಯುವತಿ ಚಿಕಿತ್ಸೆ ಫಲಿಸದೆ ಶನಿವಾರ ಕೊನೆಯುಸಿರೆಳೆದಿದ್ದಾಳೆ.

Unnao rape victim died latest news
ಅತ್ಯಾಚಾರ ಸಂತ್ರಸ್ತೆ ಸಾವು
author img

By

Published : Dec 22, 2019, 4:19 AM IST

ಉನ್ನಾವೋ: ಅತ್ಯಾಚಾರ ಆರೋಪಿಗೆ ಹೈಕೋರ್ಟ್​ನಿಂದ ಜಾಮೀನು ಸಿಕ್ಕ ಹಿನ್ನೆಲೆ ಉತ್ತರ ಪ್ರದೇಶದ ಉನ್ನಾವೋ ಎಸ್‌ಪಿ ಕಚೇರಿ ಬಳಿ ಬೆಂಕಿ ಹಚ್ಚಿಕೊಂಡಿದ್ದ 23 ವರ್ಷದ ಸಂತ್ರಸ್ತ ಯುವತಿ, ಶನಿವಾರ ಚಿಕಿತ್ಸೆ ಫಲಿಸದೆ ಕಾನ್ಪುರದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಅತ್ಯಾಚಾರ ಆರೋಪಿ, ಅವಧೇಶ್​ ಸಿಂಗ್​ಗೆ ನ್ಯಾಯಾಲಯದಿಂದ ನಿರೀಕ್ಷಿತ ಜಾಮೀನು ಸಿಕ್ಕಿದ್ದಕ್ಕೆ ಉನ್ನಾವೋದ ಹಸಂಗಂಜ್ ಕೊಟ್ವಾಲಿ ಪ್ರದೇಶದ ನಿವಾಸಿಯಾಗಿರುವ ನೊಂದ ಯುವತಿ, ಡಿ.16ರಂದು ಉನ್ನಾವೋ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿ ಬೆಂಕಿ ಹಚ್ಚಿಕೊಂಡಿದ್ದಳು. ಶೇ.70ರಷ್ಟು ಸುಟ್ಟ ಗಾಯಗಳಾಗಿದ್ದ ಆಕೆಯನ್ನು ಕಾನ್ಪುರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆಂದು ಲಾಲಾ ಲಜ್​ಪತ್​​ ರಾಯ್​ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾಳೆ.

ಆರೋಪಿಯು ಸಂತ್ರಸ್ತೆಗೆ 10 ವರ್ಷಗಳಿಂದ ತಿಳಿದಿದ್ದು, ಇಬ್ಬರೂ ಪರಸ್ಪರ ಸಂಬಂಧ ಹೊಂದಿದ್ದರು. ಆದರೆ ಆರೋಪಿಯು ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ನೊಂದ ಯುವತಿಯು ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ದೂರು ದಾಖಲಿಸಿದ್ದರು. ಆದರೆ ಆರೋಪಿಗೆ ಹೈಕೋರ್ಟ್​ನಿಂದ ಜಾಮೀನು ದೊರೆತಿದ್ದರಿಂದ ನೊಂದು ಯುವತಿ ಸ್ವತಃ ಬೆಂಕಿ ಹಚ್ಚಿಕೊಂಡಿದ್ದಳು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Intro:Body:

national

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.