ನವದೆಹಲಿ: 'ಅನ್ಲಾಕ್ 2'ಗಾಗಿ ಗೃಹ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ್ದು, ಜುಲೈ 1ರಿಂದ ಇದು ಜಾರಿಗೆ ಬರಲಿದೆ.
ಕೆಲ ಚಟುವಟಿಕೆಗಳನ್ನು ಹಂತ - ಹಂತವಾಗಿ ಪುನಃ ತೆರೆಯುವ ಪ್ರಕ್ರಿಯೆಗೆ ಅನುಮೋದನೆ ದೊರಕಿದ್ದು, ದೇಶೀಯ ವಿಮಾನಗಳು ಮತ್ತು ಪ್ರಯಾಣಿಕರ ರೈಲುಗಳನ್ನು ಹಂತ -ಹಂತವಾಗಿ ತೆರೆಯುವ ಪ್ರಕ್ರಿಯೆ ನಡೆಯಲಿದೆ.
ಜುಲೈ 31ರವರೆಗೆ ಶಾಲೆಗಳು, ಕಾಲೇಜುಗಳು ಮತ್ತು ತರಬೇತಿ ಸಂಸ್ಥೆಗಳು ಮುಚ್ಚಲ್ಪಡುತ್ತವೆ. ರಾಜ್ಯಗಳೊಂದಿಗೆ ವ್ಯಾಪಕ ಸಮಾಲೋಚನೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗೃಹ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕಂಟೇನ್‌ಮೆಂಟ್ ವಲಯದಲ್ಲಿ ಜುಲೈ 31ರವರೆಗೆ ಲಾಕ್‌ಡೌನ್ ಜಾರಿಯಲ್ಲಿರುತ್ತದೆ. ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗುತ್ತದೆ.
ಶಿಫ್ಟ್ಗಳಲ್ಲಿ ಕೆಲಸ ಮಾಡುವ ಕೈಗಾರಿಕಾ ಘಟಕಗಳ ತಡೆರಹಿತ ಕಾರ್ಯಾಚರಣೆ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಸರಕುಗಳ ಚಲನೆ, ಸರಕುಗಳನ್ನು ಲೋಡ್ ಮತ್ತು ಅನ್ಲೋಡ್ ಮಾಡುವುದು, ಬಸ್, ರೈಲು ಮತ್ತು ವಿಮಾನಗಳಿಂದ ಬಂದ ವ್ಯಕ್ತಿಗಳನ್ನು ತಮ್ಮ ಸ್ಥಳಗಳಿಗೆ ಸ್ಥಳಾಂತರಿಸುವುದಕ್ಕಾಗಿ ರಾತ್ರಿ ಕರ್ಫ್ಯೂನಲ್ಲಿ ಅವರಿಗೆ ವಿನಾಯಿತಿ ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ 4 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೊರೊನಾ ವೈರಸ್ ಹರಡಲು ಪ್ರಾರಂಭವಾದ ಬಳಿಕ ಪ್ರಧಾನ ಮಂತ್ರಿಯವರ ಆರನೇ ಭಾಷಣ ಇದಾಗಲಿದೆ.