ಚೆನ್ನೈ: ವಂಚನೆ ಪ್ರಕರಣದಲ್ಲಿ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್ಗೆ ವಿಶೇಷ ಸಿಬಿಐ ಕೋರ್ಟ್ 12 ವರ್ಷ ಜೈಲು ಶಿಕ್ಷೆ, 2 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.
ಚೆನ್ನೈನ ಅಣ್ಣಾ ನಗರದ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್ ಆಗಿದ್ದ ಕಣ್ಣನ್ ಶಿಕ್ಷೆಗೊಳಗಾದವ.
2009ರಲ್ಲಿ ಯುನಿಯನ್ ಬ್ಯಾಂಕ್ಗೆ 6.19 ಕೋಟಿ ರೂ. ನಷ್ಟ ಉಂಟಾದ ಹಿನ್ನೆಲೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಕಣ್ಣನ್, ಮಂಜುಳಾ, ನರೇಶ್ ಕುಮಾರ್, ಪಾರ್ವತಿ ರಾಮಕೃಷ್ಣನ್ ಮತ್ತು ಅನುರಾಗ್ ವಿರುದ್ಧ ದೂರು ದಾಖಲಾಗಿತ್ತು.
ಹಾಗೆಯೇ ಷಡ್ಯಂತ್ರ ರೂಪಿದ ಆರೋಪದ ಮೇಲೆ ರಾಷ್ಟ್ರೀಯ ಔಷಧ ಕಂಪೆನಿಯ ಮಾಲೀಕ ಅನುರಾಗ್ ಜೈನ್ಗೆ 10 ವರ್ಷ ಜೈಲು, 4 ಲಕ್ಷ ದಂಡ ಮತ್ತು ಬ್ಯಾಂಕ್ ಸಿಬ್ಬಂದಿ ಮಂಜುಳಾಗೆ 2 ವರ್ಷ ಜೈಲು ಮತ್ತು 1 ಲಕ್ಷ ದಂಡ ಜೊತೆಗೆ ಪಾರ್ವತಿ ರಾಮಕೃಷ್ಣನ್ಗೆ 6ವರ್ಷ ಜೈಲು, 1 ಲಕ್ಷ ದಂಡ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.