ಉನಾ (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಚುರುಡು ಗ್ರಾಮದ ನಿವಾಸಿ ಸಂಜೀವ್ ಕುಮಾರ್ ಎಂಬುವರು ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ.
ಸಂಜೀವ್ ಕುಮಾರ್ ಅವರು ಪಂಜಾಬ್ ರಾಜ್ಯ ಮಹಾಲಕ್ಷ್ಮಿ ದೀಪಾವಳಿ ಪೂಜಾ ಬಂಪರ್ ಲಾಟರಿಯನ್ನು ಗೆದ್ದಿದ್ದಾರೆ. ಕುಮಾರ್ ನಿತ್ಯ ಪೆಯಿಂಟಿಂಗ್, ಪ್ಲಂಬರ್ ಮತ್ತು ಎಲೆಕ್ಟ್ರಿಷನ್ ಆಗಿ ಕೂಲಿ ಕೆಲಸ ಮಾಡುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಲಾಟರಿ ಖರೀದಿಸುವ ಹವ್ಯಾಸ ಇರಿಸಿಕೊಂಡಿದ್ದ ಈತ, ಒಂದಲ್ಲ ಒಂದು ದಿನ ತನ್ನ ಅದೃಷ್ಟ ಕೈಹಿಡಿಯಲಿದ ಎಂದು ನಂಬಿದ್ದ.
ಅಂತೆಯೇ, ಈ ವರ್ಷದ ದೀಪಾವಳಿಯಲ್ಲಿ ಭರ್ಜರಿ ಮೊತ್ತದ ಲಾಟರಿ ಹೊಡೆದಿದೆ. ಈ ಬಗ್ಗೆ ಈಟಿವಿ ಭಾರತ್ ಜೊತೆಗೆ ಮಾತನಾಡಿರುವ ಸಂಜೀವ್ ಕುಮಾರ್, ನನ್ನ ಮಗನಿಗೆ ಚಂಡೀಗಢದ ಪಿಜಿಐ ವೈದ್ಯಕೀಯ ಸಂಸ್ಥೆಯಲ್ಲಿ ಚಿಕಿತ್ಸೆ ಕೊಡಿಸಿ ವಾಪಸ್ ಆಗುತ್ತಿದ್ದೆ. ನಂಗಲ್ ಬಸ್ ನಿಲ್ದಾಣದ ಬಳಿ ಲಾಟರಿ ಅಂಗಡಿಯೊಂದನ್ನು ನೋಡಿ ನಾನು ಮತ್ತು ನನ್ನ ಮಗ ಒಂದು ಲಾಟರಿ ಖರೀದಿಸಿದ್ದೆವು. ಎ ಮತ್ತು ಬಿ ಸರಣಿಯ ಎರಡು ಲಾಟರಿ ಟಿಕೆಟ್ಗಳನ್ನು ಖರೀದಿಸಿದ್ದೆವು. ಈ ಲಾಟರಿ ಟಿಕೆಟ್ಗಳಲ್ಲಿ ನನ್ನ ಮಗ ಆಯ್ಕೆ ಮಾಡಿದ್ದ ಲಾಟರಿ ಟಿಕೆಟ್ ನಂಬರ್ಗೆ ಜಾಕ್ಪಾಟ್ ಹೊಡೆದಿದೆ. 2.5 ಕೋಟಿ ರೂ. ಲಾಟರಿ ಬಂದಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.