ETV Bharat / bharat

ವಿಶ್ವಸಂಸ್ಥೆಯ 75ನೇ ವಾರ್ಷಿಕೋತ್ಸವದಲ್ಲಿ ಪ್ರಧಾನಿ ಮೋದಿ ಭಾಷಣ - ವಿಶ್ವಸಂಸ್ಥೆಯ 75ನೇ ವಾರ್ಷಿಕೋತ್ಸವ

ವಿಶ್ವಸಂಸ್ಥೆಯ 75ನೇ ವಾರ್ಷಿಕೋತ್ಸವ ಜುಲೈ 17ರಂದು ನಡೆಯಲಿದ್ದು, ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಲಿದ್ದಾರೆ.

pm modi
ಪ್ರಧಾನಿ ಮೋದಿ
author img

By

Published : Jul 15, 2020, 10:51 AM IST

ನವದೆಹಲಿ: ಜುಲೈ 17ರಂದು ವಿಶ್ವಸಂಸ್ಥೆಯ 75ನೇ ವಾರ್ಷಿಕೋತ್ಸವದ ನಿಮಿತ್ತ ಪ್ರಧಾನಿ ಮೋದಿ ಭಾಷಣ ಮಾಡಲಿದ್ದು, ವಿಶ್ವ ಸಂಸ್ಥೆಯ ಅಂಗ ಸಂಸ್ಥೆಯಾದ ಆರ್ಥಿಕ ಹಾಗೂ ಸಾಮಾಜಿಕ ಮಂಡಳಿಯ ಉನ್ನತಮಟ್ಟದ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ​ ಭಾಷಣ ಮಾಡಲಿದ್ದಾರೆ.

ಭಾರತ ಭದ್ರತಾ ಮಂಡಳಿಯ ಕಾಯಂ ಅಲ್ಲದ ಸದಸ್ಯ ರಾಷ್ಟ್ರಗಳ ಸ್ಥಾನಕ್ಕೆ ಆಯ್ಕೆಯಾದ ನಂತರ ಪ್ರಧಾನಿ ಮೋದಿ ಮೊದಲ ಬಾರಿಗೆ ಭಾಷಣ ಮಾಡಲಿದ್ದು, ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ.

ಈ ವೇಳೆ, ನಾರ್ವೆಯ ಪ್ರಧಾನಿ ಎರ್ನಾ ಸೋಲ್​ಬರ್ಗ್​ ಹಾಗೂ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್​ ಪಾಲ್ಗೊಳ್ಳಲಿದ್ದು, ಅತ್ಯಂತ ಪ್ರಮುಖ ವಿಷಯಗಳ ಬಗ್ಗೆ ಪ್ರಧಾನಿ ಮೋದಿ ಗಮನ ಸೆಳೆಯುವ ಸಾಧ್ಯತೆ ಇದೆ.

ಈ ಉನ್ನತ ಮಟ್ಟದ ಸಭೆ ವರ್ಷಕ್ಕೊಂದು ಬಾರಿ ನಡೆಯಲಿದ್ದು ಸರ್ಕಾರಿ, ಖಾಸಗಿ ಹಾಗೂ ಇತರ ಕ್ಷೇತ್ರಗಳ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಈ ಸಭೆಯು '' ಕೋವಿಡ್ 19 ನಂತರದ ಬಹುಪಕ್ಷೀಯತೆ: 75ನೇ ವಾರ್ಷಿಕೋತ್ಸವದಲ್ಲಿ ವಿಶ್ವಸಂಸ್ಥೆ ಯಾವ ರೀತಿ ಇರಬೇಕು..?'' ಎಂಬ ವಿಷಯವನ್ನ ಕೇಂದ್ರೀಕರಿಸಿ ನಡೆಯುತ್ತಿದೆ.

192 ಮತಗಳಲ್ಲಿ 184 ಮತಗಳನ್ನು ಪಡೆದು ವಿಶ್ವಸಂಸ್ಥೆಯ ಕಾಯಂ ಸದಸ್ಯರದಲ್ಲದ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸದಸ್ಯ ಸ್ಥಾನಕ್ಕೆ ಭಾರತ ಆಯ್ಕೆಯಾಗಿದೆ. ಸದಸ್ಯ ಸ್ಥಾನಕ್ಕೆ ಆಯ್ಕೆ ಆದ ಮೇಲೆ ಪ್ರಥಮ ಬಾರಿಗೆ ಮೋದಿ ಭಾಷಣ ಮಾಡಲಿರುವ ಕಾರಣದಿಂದ ಹಾಗೂ ಏಷಿಯಾ ಪೆಸಿಫಿಕ್​ ಭಾಗದಲ್ಲಿ ಭಾರತ ಏಕೈಕ ರಾಷ್ಟ್ರವಾಗಿರುವ ಕಾರಣದಿಂದ ಈ ಸಭೆ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ.

ಇದಕ್ಕೂ ಮೊದಲು ಪ್ರಧಾನಿ ಮೋದಿ 2016ರ ಜನವರಿ 22ರಂದು ವಿಶ್ವಸಂಸ್ಥೆಯ 70ನೇ ವಾರ್ಷಿಕೋತ್ಸವದಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದ್ದರು.

ಸಾಮಾಜಿಕ ಹಾಗೂ ಭದ್ರತಾ ಮಂಡಳಿಯ ಮೊದಲ ಸಭೆ ಇಂಗ್ಲೆಂಡ್​ನ ಲಂಡನ್​ನಲ್ಲಿ 1946ರ ಜನವರಿ 23 ರಂದು ನಡೆದಿತ್ತು.ಈ ವೇಳೆ ಭಾರತವೇ ಆ ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದು, ಸರ್​ ರಾಮಸ್ವಾಮಿ ಮುದಲಿಯಾರ್ ಮೊದಲ ಅಧ್ಯಕ್ಷರಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.