ETV Bharat / bharat

ಉಚಿತವಾಗಿ ಆಮ್ಲಜನಕ ಸಿಲಿಂಡರ್ ಹಂಚುತ್ತಿರುವ ಸ್ನೇಹಜೀವಿಗಳು! - mumbai latest news

ಶಹನಾವಾಜ್ ಹುಸೇನ್ ಮತ್ತು ಅಬ್ಬಾಸ್ ರಿಜ್ವಿ ಎಂಬ ಈ ಇಬ್ಬರು ಸ್ನೇಹಿತರು ಕೋವಿಡ್​ 19 ರ ಈ ಸಮಯದಲ್ಲಿ ಮುಂಬೈನಾದ್ಯಂತ ರೋಗಿಗಳಿಗೆ ಉಚಿತ ಆಮ್ಲಜನಕ ಸಿಲಿಂಡರ್‌ಗಳನ್ನು ಒದಗಿಸುತ್ತಿದ್ದಾರೆ.

Two friends are providing free oxygen cylinders
ಉಚಿತವಾಗಿ ಆಮ್ಲಜನಕ ಸಿಲಿಂಡರ್ ಹಂಚುತ್ತಿರುವ ಸ್ನೇಹಜೀವಿಗಳು
author img

By

Published : Jun 24, 2020, 6:20 AM IST

ಮುಂಬೈ: ಸ್ನೇಹ ಅಂದ್ರೆ ಇದು ಅನ್ನೊ ಮಟ್ಟಿಗೆ ಇದೆ ಇವರಿಬ್ಬರ ಸಾಮಾಜಿಕ ಕಾರ್ಯ. ಈ ಇಬ್ಬರು ಸ್ನೇಹಿತರು ಯಾರಿಗೆ ಅಗತ್ಯ ಇದೆಯೋ ಅವರಿಗೆ ಉಚಿತವಾಗಿ ಆಮ್ಲಜನಕ ಸಿಲಿಂಡರ್‌ಗಳನ್ನು ನೀಡುತ್ತಾ ಮಾನವೀಯ ಕಾರ್ಯ ಮಾಡಿಕೊಂಡು ಬರುತ್ತಿದ್ದಾರೆ.

ಶಹನಾವಾಜ್ ಹುಸೇನ್ ಮತ್ತು ಅಬ್ಬಾಸ್ ರಿಜ್ವಿ ಎಂಬ ಈ ಇಬ್ಬರು ಸ್ನೇಹಿತರು ಕೋವಿಡ್​ 19 ರ ಈ ಸಮಯದಲ್ಲಿ ಮುಂಬೈನಾದ್ಯಂತ ರೋಗಿಗಳಿಗೆ ಉಚಿತ ಆಮ್ಲಜನಕ ಸಿಲಿಂಡರ್‌ಗಳನ್ನು ಒದಗಿಸುತ್ತಿದ್ದಾರೆ. ಇದುವರೆಗೂ ನಾವು ಸುಮಾರು 250-300 ಸಿಲಿಂಡರ್‌ಗಳನ್ನು ಒದಗಿಸಿದ್ದೇವೆ. ವೈದ್ಯರಿಂದ ಪ್ರಿಸ್ಕ್ರಿಪ್ಷನ್ ಇದ್ದರೆ ಯಾರಾದರೂ ನಮ್ಮಿಂದ ಸಿಲಿಂಡರ್‌ಗಳನ್ನು ತೆಗೆದುಕೊಳ್ಳಬಹುದು ಎಂದು ಹೇಳುತ್ತಾರೆ ಶಹನಾವಾಜ್.

Two friends are providing free oxygen cylinders
ಶಹನಾವಾಜ್ ಹುಸೇನ್ ಮತ್ತು ಅಬ್ಬಾಸ್ ರಿಜ್ವಿ

6 ತಿಂಗಳ ಗರ್ಭಿಣಿಯಾಗಿದ್ದ ನನ್ನ ಸೋದರಸಂಬಂಧಿ ಆಮ್ಲಜನಕದ ಕೊರತೆಯಿಂದ ನಿಧನರಾದರು. ಈ ಹಿನ್ನೆಲೆ ಆಕ್ಸಿಜನ್ ಕೊರತೆಯಿಂದ ಜನರು ಯಾವ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆಂದು ನಮಗೆ ಅರಿವಾಯಿತು. ಈ ಕಾರಣಕ್ಕಾಗಿ ಈ ಕಾರ್ಯ ಮಾಡಿಕೊಂಡು ಬರುತ್ತೇವೆ ಎನ್ನುತ್ತಾರೆ ಶಹನಾವಾಜ್​. ಹೆಚ್ಚುತ್ತಿರುವ ಸಿಲಿಂಡರ್​ ಬೇಡಿಕೆಯ ಪೂರೈಕೆಗಾಗಿ ಶಹನಾವಾಜ್ ತಮ್ಮ ಕಾರ್​ನ್ನು ಕೂಡ ಮಾರಾಟ ಮಾಡಿರುವುದು ಮಾನವೀಯತೆಗೆ ಹಿಡಿದ ಕೈಗನ್ನಡಿಯಂತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.