ಇಂದೋರ್ (ಮಧ್ಯಪ್ರದೇಶ): ಅಶ್ಲೀಲ ವಸ್ತುಗಳ ರಚನೆ ಮತ್ತು ವಿತರಣೆಗೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಮಂಗಳವಾರ ಇಂದೋರ್ ಪೊಲೀಸರು ಬಂಧಿಸಿದ್ದಾರೆ
ಬಂಧಿತ ವ್ಯಕ್ತಿಗಳನ್ನು ದೀಪಕ್ ಸೈನಿ ಮತ್ತು ಅಶೋಕ್ ಸಿಂಗ್ ಎಂದು ಗುರುತಿಸಲಾಗಿದೆ.
"ಅಶ್ಲೀಲ ವಸ್ತುಗಳ ರಚನೆ ಮತ್ತು ವಿತರಣೆಗೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಮಂಗಳವಾರ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಪಾಕಿಸ್ತಾನಿ ಪ್ರಜೆಯ ಪಾತ್ರವೂ ಇದೆ ಎಂದು ತಿಳಿದು ಬಂದಿದೆ. ಪ್ರಕರಣದಲ್ಲಿ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ. ನಾವು ಪ್ರಕರಣದ ತನಿಖೆ ನಡೆಸುತ್ತಿದ್ದೇವೆ" ಎಂದು ಸೈಬರ್ ವಿಭಾಗದ ಎಸ್ಪಿ ಜಿತೇಂದರ್ ಸಿಂಗ್ ಹೇಳಿದರು.
"ಈ ಪ್ರಕರಣದಲ್ಲಿ ಇಂದೋರ್‌ನಿಂದ ಮುಂಬೈಗೆ ಸಂಪರ್ಕ ಇದೆ. ಅಶೋಕ್ ಸಿಂಗ್ ಮತ್ತು ಮುಂಬೈನ ವಿಜಯಾನಂದ್ ಪಾಂಡೆ ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಅವರು ಅಶ್ಲೀಲ ವಿಡಿಯೋಗಳನ್ನು ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ " ಎಂದು ಅವರು ಹೇಳಿದರು.