ETV Bharat / bharat

ಕಾರ್ಖಾನೆಗಳಲ್ಲಿ ದುರಂತಗಳು: ಮಾಲೀಕರ ಮತ್ತು ಸರ್ಕಾರದ ಪಾತ್ರವೇನು?

ಕಂಪನಿಗಳನ್ನು ಮುನ್ನಡೆಸುವಾಗ ಕಾರ್ಮಿಕರ ರಕ್ಷಣೆಗಾಗಿ ಹೆಚ್ಚಿನ ಜಾಗರೂಕತೆ ಅಗತ್ಯ. ಅದಕ್ಕೆ ಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು. ಆದರೆ, ಅವುಗಳನ್ನು ಅನುಸರಿದ ಪರಿಣಾಮ ಅನಾಹುತಗಳು ಸಂಭವಿಸಲು ಕಾರಣವಾಗುತ್ತದೆ. ಕಾರ್ಖಾನೆಗಳು ಮತ್ತು ಸರ್ಕಾರ ಮಾಡಿಕೊಳ್ಳುತ್ತಿರುವ ಎಡವಟ್ಟುಗಳೇನು ಎಂಬ ಕುರಿತು ವರದಿ ಇಲ್ಲಿದೆ.

Tragedies in factories: What is the role of the owner and the government?
ರಾಸಾಯನಿಕ ಕಾರ್ಖಾನೆ ಎಲ್‌ಜಿ ಪಾಲಿಮರ್ಸ್​​​
author img

By

Published : May 12, 2020, 8:19 PM IST

ಆಂಧ್ರಪ್ರದೇಶ​: ಇಲ್ಲಿನ ವಿಶಾಖಪಟ್ಟಣಂದಲ್ಲಿ ಜರುಗಿದ ವಿಷಾನಿಲ ಸೋರಿಕೆ ದುರಂತ ಎಲ್ಲರನ್ನೂ ಅವಕ್ಕಾಗುವಂತೆ ಮಾಡಿದೆ. ನಿಯಮಗಳು ಮತ್ತು ಶಾಸನಬದ್ಧ ನಿರ್ಬಂಧಗಳನ್ನು ಕಂಪನಿ ಪಾಲಿಸದ ಕಾರಣದಿಂದಲೇ ಈ ಘಟನೆಯಲ್ಲಿ 11 ಮಂದಿ ಪ್ರಾಣ ಕಳೆದುಕೊಂಡರು. ಇನ್ನೂ ಕೆಲವರಿಗೆ ಚಿಕಿತ್ಸೆ ಮುಂದುವರೆದಿದೆ.

ಬಹುರಾಷ್ಟ್ರೀಯ ರಾಸಾಯನಿಕ ಕಾರ್ಖಾನೆ ಎಲ್‌ಜಿ ಪಾಲಿಮರ್ಸ್​​​ ವಿಷಾನಿಲ ಸೋರಿಕೆ ದುರಂತ, ಕಂಪನಿಗಳು ತೆಗೆದುಕೊಳ್ಳಬೇಕಾದ ತುರ್ತು ಕ್ರಮವನ್ನು ಸೂಚಿಸುತ್ತದೆ. ಅಲ್ಲದೆ, 46 ವರ್ಷಗಳ ಹಿಂದೆ ನಡೆದ ಭೋಪಾಲ್ ವಿಷಾನಿಲ ದುರಂತವನ್ನೂ ನೆನಪಿಸಿತು. ಅಂದು 3,500 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಅವಘಡಗಳಿಗೆ ಕಂಪನಿಗಳ ಮಾಲೀಕರು ಮಾಡಿರುವ ಎಡವಟ್ಟುಗಳೇ ಕಾರಣ.

  • 2018ರಲ್ಲಿ ವರಂಗಲ್‌ನ ಕಾಶಿಬುಗ್ಗಾದಲ್ಲಿ ಪಟಾಕಿ ಕೈಗಾರಿಕೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 10 ಮಂದಿ ಬಲಿಯಾಗಿದ್ದರು.
  • ಕೆಲ ತಿಂಗಳ ಹಿಂದೆ ಜನಗಾಮ ಜಿಲ್ಲೆಯ ರಘುನಾಥಪಲ್ಲಿ ಟಿನ್ನರ್ ಉದ್ಯಮದಲ್ಲಿ ವಿದ್ಯುದಾಘಾತವಾಗಿತ್ತು. ಪಕ್ಕದಲ್ಲಿದ್ದ ಕಸ್ತೂರ್​ ಬಾ ಗಾಂಧಿ ವಿದ್ಯಾಲಯದ 60 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು. ಸಾವು-ನೋವುಗಳು ವರದಿಯಾಗಿರಲಿಲ್ಲ.
  • ಕೆಲವು ತಿಂಗಳ ಹಿಂದೆ ಮಡಿಕೊಂಡದ ಕಾರ್ಖಾನೆಯೊಂದರಲ್ಲಿ ರಾಸಾಯನಿಕ ಅಪಘಾತ ಸಂಭವಿಸಿ ಇಬ್ಬರು ಗಾಯಗೊಂಡರೆ ಮಹಿಳೆಯೊಬ್ಬರು ಮೃತಪಟ್ಟಿದ್ದರು.

ಇವು ತೆಲುಗು ರಾಜ್ಯಗಳಲ್ಲಿ ಜರುಗಿದ ದುರಂತಗಳ ಉದಾಹರಣೆಗಳಷ್ಟೆ. ದೇಶಾದ್ಯಂತ ಸಂಭವಿಸಿರುವ ದುರಂತಗಳು ಇನ್ನೆಷ್ಟಿರಬಹುದು. ದುರಂತದಲ್ಲಿ ಬಲಿಯಾದ ಅಮಾಯಕ ಜೀವಗಳು ಎಷ್ಟಿರಬಹುದು. ಕಂಪನಿಗಳು ಆರಂಭವಾದಾಗ ಸರ್ಕಾರಗಳು ಕೆಲ ನಿಯಮಗಳನ್ನು ಪಾಲಿಸುವಂತೆ ಆದೇಶಿಸುತ್ತದೆ. ಆದರೆ, ಅವುಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ಮುನ್ನೆಡುಸುತ್ತವೆ. ಇದು ಮಾಲೀಕರ ಎಡವಟ್ಟಾದರೆ, ಕಂಪನಿಗಳು ನಿಯಮಗಳನ್ನು ಅನುಸರಿಸುತ್ತಿವೆಯೇ, ಇಲ್ಲವೇ ಎಂಬುದನ್ನು ಸರ್ಕಾರಗಳು ಪರಿಶೀಲಿಸದಿರುವುದು ಮತ್ತೊಂದು ಎಡವಟ್ಟು.

ನಿಯಮ ಮತ್ತು ನಿರ್ದೇಶನಗಳನ್ನು ಪಾಲಿಸದ ಕಂಪನಿಗಳಿಗೆ ಭಾರೀ ಪ್ರಮಾಣದಲ್ಲಿ ದಂಡ ವಿಧಿಸಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಬೇಕು. ಅದಾದ ಬಳಿಕವೂ ಮತ್ತೆ ಅದನ್ನೆ ಮುಂದುವರಿಸಿದರೆ, ಕಂಪನಿಗಳ ಪರವಾನಗಿಯನ್ನು ಶಾಶ್ವತವಾಗಿ ರದ್ದುಗೊಳಿಸಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಅಧಿಕಾರಿಗಳ ಪರಿಶೀಲನೆಯ ಕೊರತೆ ಮತ್ತು ಮಾಲೀಕತ್ವದ ನಿರ್ಲಕ್ಷ್ಯದಿಂದಾಗಿ ಅನೇಕ ಕೈಗಾರಿಕೆಗಳ ದುರಂತಗಳಿಗೆ ಕಾರ್ಮಿಕರು ಪ್ರಾಣಕಳೆದುಕೊಂಡ ಉದಾಹರಣೆಗಳಿವೆ. ಇತ್ತ ಪರಿಸರದ ಮೇಲೂ ತೀವ್ರ ಪರಿಣಾಮ ಬೀರುತ್ತದೆ.

ಇದು ಅತ್ಯಂತ ಹೆಚ್ಚು ಅಪಾಯಕಾರಿ

ಬೃಹತ್ ಉದ್ಯಮ ಎಂದರೆ ಭೋಪಾಲ್​​​​​​ ಜಿಲ್ಲೆಯ ಸಿಂಗರೇಣಿ ಗಣಿಗಾರಿಕೆ. ಇಲ್ಲಿ ತೆರೆದ ಎರಕಹೊಯ್ದ ಗಣಿಗಳಿವೆ. ಲಕ್ಷಾಂತರ ಟನ್ ಕಲ್ಲಿದ್ದಲು ಕೊರೆಯುವಾಗ ಅನೇಕ ಅನಾಹುತಗಳು ಜರುಗುವ ಸಾಧ್ಯತೆ ಇದೆ. ಆ ಸಂದರ್ಭದಲ್ಲಿ ಇಂಗಾಲದ ಮೋನಾಕ್ಸೈಡ್ ಬಿಡುಗಡೆಯಾಗುತ್ತದೆ. ಅತ್ಯಂತ ಅಪಾಯಕಾರಿಯಾದ ಈ ಅನಿಲ ಹೊರಬಾರದಂತೆ ಅಡ್ಡಗೋಡೆಗಳನ್ನು ನಿರ್ಮಿಸಲಾಗಿದೆ. ಗ್ಯಾಸ್​​​ನಿಂದ ಈವರೆಗೂ ಸಾವು-ನೋವು ಸಂಭವಿಸಿಲ್ಲ.

ಹಿಂದೆ, ಛಾವಣಿಯ ಕುಸಿತ, ಟಬ್‌ಗಳು ಬೀಳುವುದು, ಮ್ಯಾನ್‌ರೈಡಿಂಗ್‌ನಿಂದ ಕೆಲವರು ಸಾವನ್ನಪ್ಪಿದ್ದಾರೆ. ಎಷ್ಟೇ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ ಈ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗಿಲ್ಲ. ನೂತನ ತಂತ್ರಜ್ಞಾನದ ಅಳವಡಿಸಿಕೊಂಡು ಆಘಾತಗಳನ್ನು ಸಂಪೂರ್ಣವಾಗಿ ತಪ್ಪಿಸಬೇಕಾಗಿದೆ. ಕಾರ್ಮಿಕರ ರಕ್ಷಣೆಗಾಗಿ ಹೆಚ್ಚಿನ ಜಾಗರೂಕತೆ ಅಗತ್ಯ. ಖಾಸಗಿ ಕೈಗಾರಿಕೆಗಳಲ್ಲಿ ಹೆಚ್ಚಾಗಿ ಗ್ರಾನೈಟ್, ಕಲ್ಲು ಗಣಿಗಾರಿಕೆ, ಹತ್ತಿ ಜಿನ್ನಿಂಗ್, ಅಕ್ಕಿ ಗಿರಣಿಗಳು ಮತ್ತು ಆಹಾರ ಸಂಸ್ಕರಣಾ ಘಟಕಗಳಿವೆ. ಇವೆಲ್ಲವೂ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ನಗರಗಳ ಸಣ್ಣ ಕೈಗಾರಿಕೆಗಳು ಅಗ್ನಿಶಾಮಕ ಇಲಾಖೆ ಮತ್ತು ಸಂಬಂಧಿಸಿದ ಅಧಿಕಾರಿಗಳ ಅನುಮತಿ ಪಡೆಯದೆ ಕಂಪನಿ ನಡೆಸುವುದರಿಂದ ಇಂಥ ಘಟನೆಗಳಿಗೆ ಕಾರಣವಾಗುತ್ತದೆ. ಈ ಕುರಿತು ಟೀಕೆಯೂ ವ್ಯಕ್ತವಾಗಿದೆ. ಒಟ್ಟಾರೆ ವಿಶಾಖಪಟ್ಟಣ ಘಟನೆ ನಂತರ ಉದ್ಯಮದ ಮಾಲೀಕರು ಮತ್ತು ಉದ್ಯಮದ ಬಗ್ಗೆ ನಾವು ಬಹಳ ಜಾಗರೂಕರಾಗಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.