ETV Bharat / bharat

ರಾಜ್ಯಸಭಾ ಚುನಾವಣೆ ಸನಿಹದಲ್ಲೇ 'ಕೈ'ಯಲ್ಲಿ ಅಸಮಾಧಾನ ಸ್ಫೋಟ: ಈವರೆಗೆ 8 ಶಾಸಕರು ಗುಡ್​ಬೈ - ಬಿಜೆಪಿ

ರಾಜ್ಯಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಗುಜರಾತ್​ ಕಾಂಗ್ರೆಸ್​ನಲ್ಲಿ ಭಿನ್ನಮತ ಶುರುವಾಗಿದೆ. ಈ ತಿಂಗಳಲ್ಲಿ ಮೂವರು ಶಾಸಕರ ರಾಜೀನಾಮೆ ಅಂಗೀಕಾರವಾಗಿದ್ದು, ಕಾಂಗ್ರೆಸ್​ ಬಿಟ್ಟ ಶಾಸಕರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.

congress mlas
ಕಾಂಗ್ರೆಸ್​ ಶಾಸಕರು
author img

By

Published : Jun 14, 2020, 12:38 PM IST

ಗಾಂಧಿನಗರ (ಗುಜರಾತ್​​): ರಾಜ್ಯಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಗುಜರಾತ್​ ಕಾಂಗ್ರೆಸ್​ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಕಾಂಗ್ರೆಸ್​ ಶಾಸಕರ ರಾಜೀನಾಮೆ ಪರ್ವ ಮುಂದುವರೆದಿದೆ. ಈಗ ಮತ್ತಿಬ್ಬರು ಶಾಸಕರ ರಾಜೀನಾಮೆಯೊಂದಿಗೆ ಕಾಂಗ್ರೆಸ್​ನ ಶಾಸಕ ಸ್ಥಾನಕ್ಕೆ ಒಟ್ಟು 8 ಮಂದಿ ಈವರೆಗೆ ಗುಡ್​ ಬೈ ಹೇಳಿದ್ದಾರೆ.

ಮೊರ್ಬಿ ಶಾಸಕ ಬ್ರಿಜೇಶ್ ಮೆರ್ಜಾಗೂ ನಂತರ ಮತ್ತಿಬ್ಬರು ಕಾಂಗ್ರೆಸ್​​ಗೆ ಗುಡ್ ಬೈ ಹೇಳಿದ್ದರು. ಇದೇ ವರ್ಷದ ಮಾರ್ಚ್​​ನಲ್ಲಿ ಪ್ರವೀಣ್​ ಮರು, ಮಂಗಳ್ ಗೋವಿತ್​, ಸೋಮಬಾಯ್​ ಪಟೇಲ್​​, ಜೆ.ವಿ. ಕಕಾಡಿಯಾ, ಪ್ರದ್ಯುಮ್ನ ಜಡೇಜಾ ರಾಜೀನಾಮೆ ನೀಡಿದ್ದರು.

ಇದಾದ ನಂತರ ಗುರುವಾರವಷ್ಟೇ ಶಾಸಕರಾದ ಅಕ್ಷಯ್​ ಪಟೇಲ್​ ಹಾಗೂ ಜೀತು ಚೌಧರಿ ರಾಜೀನಾಮೆ ನೀಡಿದ್ದರು. ಶುಕ್ರವಾರ ಬ್ರಿಜೇರ್ಶ್​ ಮೆರ್ಜಾ ರಾಜೀನಾಮೆ ಸಲ್ಲಿಸಿದ್ದು, ಎಲ್ಲರ ರಾಜೀನಾಮೆ ಪತ್ರಗಳು ಅಂಗೀಕಾರವಾಗಿವೆ. ಇದರಿಂದ ಗುಜರಾತ್​ನಲ್ಲಿ ರಾಜೀನಾಮೆ ನೀಡಿದ ಕಾಂಗ್ರೆಸ್ಸಿಗರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.