ಚೆನ್ನೈ (ತಮಿಳುನಾಡು): ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020ರಲ್ಲಿ ಪ್ರಸ್ತಾಪಿಸಲಾದ ಕೇಂದ್ರದ ತ್ರಿ ಭಾಷಾ ಸೂತ್ರವನ್ನು ತಮಿಳುನಾಡು ಸರ್ಕಾರ ತಿರಸ್ಕರಿಸಿದೆ.
ರಾಜ್ಯದಲ್ಲಿ ಅನುಸರಿಸುತ್ತಿರುವ ದ್ವಿಭಾಷಾ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸರ್ಕಾರ ಹೇಳಿದೆ.
ಕ್ಯಾಬಿನೆಟ್ ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಕೆ ಪಳನಿಸ್ವಾಮಿ, ರಾಜ್ಯವು ಹಲವಾರು ದಶಕಗಳಿಂದ ದ್ವಿಭಾಷಾ ನೀತಿಯನ್ನು ಅನುಸರಿಸುತ್ತಿದೆ ಮತ್ತು ಅದರಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದರು.
"ತಮಿಳುನಾಡು ಕೇಂದ್ರದ ತ್ರಿಭಾಷೆಯ ನೀತಿಯನ್ನು ಎಂದಿಗೂ ಅನುಮತಿಸುವುದಿಲ್ಲ. ರಾಜ್ಯವು ತನ್ನ ಉಭಯ ಭಾಷಾ ನೀತಿಯೊಂದಿಗೆ (ತಮಿಳು ಮತ್ತು ಇಂಗ್ಲಿಷ್) ಮುಂದುವರಿಯುತ್ತದೆ" ಎಂದು ಮುಖ್ಯಮಂತ್ರಿಗಳು ಹೇಳಿದರು.