ETV Bharat / bharat

ಕೊರೊನಾ ಅಬ್ಬರ: ಚೆನ್ನೈನಲ್ಲಿ ಮತ್ತೆ ಲಾಕ್​ಡೌನ್​​ ಹೇರಿಕೆ - ತಮಿಳುನಾಡು ಕೊರೊನಾ ಪ್ರಕರಣ

ಚೆನ್ನೈ ಹಾಗೂ ಸುತ್ತಮುತ್ತಲಿನ ಕಾಂಚೀಪುರಂ, ಚೆಂಗಲ್ಪಟ್ಟು ಮತ್ತು ತಿರುವಳ್ಳೂರು ಜಿಲ್ಲೆಗಳಲ್ಲಿ ಜೂನ್ 19 ರಿಂದ 30ರ ವರೆಗೆ 12 ದಿನಗಳ ಕಾಲ ಸಂಪೂರ್ಣ ಲಾಕ್​ಡೌನ್​ ಜಾರಿಯಾಗಲಿದೆ.

TN government imposes complete Lock down in Chennai
ಚೆನ್ನೈನಲ್ಲಿ ಮತ್ತೆ ಲಾಕ್​ಡೌನ್
author img

By

Published : Jun 15, 2020, 4:25 PM IST

ತಮಿಳುನಾಡು: ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಚೆನ್ನೈನಲ್ಲಿ ಜೂನ್ 19 ರಿಂದ 30ರ ವರೆಗೆ ತಮಿಳುನಾಡು ಸರ್ಕಾರ ಮತ್ತೆ ಲಾಕ್​ಡೌನ್​ ಹೇರಿಕೆ ಮಾಡಿದೆ.

ಚೆನ್ನೈ ಹಾಗೂ ಸುತ್ತಮುತ್ತಲಿನ ಕಾಂಚೀಪುರಂ, ಚೆಂಗಲ್ಪಟ್ಟು ಮತ್ತು ತಿರುವಳ್ಳೂರು ಜಿಲ್ಲೆಗಳಲ್ಲಿ 12 ದಿನಗಳ ಕಾಲ ಸಂಪೂರ್ಣ ಲಾಕ್​ಡೌನ್​ ಜಾರಿಯಾಗಲಿದೆ. ಕಂಟೈನ್ಮೆಂಟ್​ ವಲಯಗಳಲ್ಲಿ ಪಡಿತರ ಅಂಗಡಿಗಳು ತೆರೆಯುವಂತಿಲ್ಲ. ಅಲ್ಲಿನ ಜನರ ಮನೆಗಳಿಗೆ ಅಗತ್ಯ ಸಾಮಗ್ರಿಗಳ ಪೂರೈಕೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಆಸ್ಪತ್ರೆಗಳು, ಲ್ಯಾಬ್​​ಗಳು, ಆಂಬ್ಯುಲೆನ್ಸ್‌ ಸೇರಿದಂತೆ ವೈದ್ಯಕೀಯ ಸೇವೆಗಳು ಲಭ್ಯವಿರುತ್ತದೆ. ಅಗತ್ಯ ವಸ್ತುಗಳ ಸಾಗಾಟಕ್ಕೆ ಯಾವುದೇ ನಿರ್ಬಂಧವಿಲ್ಲ. ಬಾಡಿಗೆ ಆಟೋ, ಟ್ಯಾಕ್ಸಿ ಮತ್ತು ಖಾಸಗಿ ವಾಹನಗಳ ಸಂಚಾರಕ್ಕೆ ಅನುಮತಿ ಇರುವುದಿಲ್ಲ. ತುರ್ತು ವೈದ್ಯಕೀಯ ಸಂದರ್ಭವಿದ್ದಲ್ಲಿ ಮಾತ್ರ ಈ ವಾಹನಗಳಿಗೆ ಅನುಮತಿಸಲಾಗುವುದು. ಬೆಳಗ್ಗೆ 6 ರಿಂದ ಮಧ್ಯಾಹ್ಯ 2 ಗಂಟೆಯ ವರೆಗೆ ತರಕಾರಿ, ದಿನಸಿ ಅಂಗಡಿಗಳು, ಪೆಟ್ರೋಲ್​ ಬಂಕ್​ ತೆರೆಯಲು, ಬೆಳಗ್ಗೆ 6 ರಿಂದ ರಾತ್ರಿ 8ರ ವರೆಗೆ ಹೋಟೆಲ್​ನಿಂದ ಪಾರ್ಸಲ್​ ತೆಗೆದುಕೊಂಡು ಹೋಗಲು ಸಮಯ ನಿಗದಿ ಪಡಿಸಲಾಗಿದೆ.

ತಮಿಳುನಾಡಲ್ಲಿ ಈವರೆಗೆ ಒಟ್ಟು 42,687 ಕೋವಿಡ್​ ಕೇಸ್​ಗಳು ಹಾಗೂ 397 ಸಾವುಗಳು ವರದಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.