ತಿರುಪ್ಪುರ್ (ತಮಿಳುನಾಡು): ಕೊರೊನಾ ಸೋಂಕು ಹರಡದಂತೆ ತಡೆಯಲು ಎಲ್ಲಾ ರಾಜ್ಯಗಳು ತಮ್ಮದೇ ಆದ ಕ್ರಮಗಳನ್ನು ತೆಗೆದುಕೊಂಡಿದೆ. ಈಗ ತಮಿಳುನಾಡಿನ ತಿರುಪ್ಪುರ್ ಜಿಲ್ಲಾಡಳಿತ ಸೋಂಕು ಹರಡದಂತೆ ತಡೆಯಲು ಸೋಂಕು ನಿವಾರಕ ಸುರಂಗವನ್ನು ಅನುಷ್ಠಾನಗೊಳಿಸಿದೆ. ಭಾರತದಲ್ಲೇ ಇದು ಮೊದಲ ಸೋಂಕು ನಿವಾರಕ ಸುರಂಗವಾಗಿದ್ದು ತಿರುಪ್ಪುರ್ ಜಿಲ್ಲಾಧಿಕಾರಿ ಕೆ.ವಿಜಯ ಕಾರ್ತಿಕೇಯನ್ ಉದ್ಘಾಟಿಸಿದ್ದಾರೆ.
ಉಝಾವರ್ ಸಂಥೈ ಪ್ರದೇಶದಲ್ಲಿರುವ ಈ ಸೋಂಕು ನಿವಾರಕ ಘಟಕದಲ್ಲಿ ಸೋಡಿಯಂ ಹೈಪೋಕ್ಲೋರೈಟ್ ಅನ್ನು ಉಪಯೋಗಿಸಲಾಗುತ್ತಿದ್ದು, ವೈದ್ಯರು ಪರೀಕ್ಷಿಸಿದ್ದಾರೆ ಎಂದು ವಿಜಯ್ ಕಾರ್ತಿಕೇಯನ್ ತಿಳಿಸಿದ್ದಾರೆ.
-
We have set up a first of it's kind #disinfection tunnel in Thennampalayam market in #Tiruppur where people will have to walk through the disinfection tunnel for 3-5secs after handwash,before entering the market ! Thanks to #YI #CII #TiruppurCoronaFighters for support ! pic.twitter.com/D0hWWqjBnl
— Vijayakarthikeyan K (@Vijaykarthikeyn) April 1, 2020 " class="align-text-top noRightClick twitterSection" data="
">We have set up a first of it's kind #disinfection tunnel in Thennampalayam market in #Tiruppur where people will have to walk through the disinfection tunnel for 3-5secs after handwash,before entering the market ! Thanks to #YI #CII #TiruppurCoronaFighters for support ! pic.twitter.com/D0hWWqjBnl
— Vijayakarthikeyan K (@Vijaykarthikeyn) April 1, 2020We have set up a first of it's kind #disinfection tunnel in Thennampalayam market in #Tiruppur where people will have to walk through the disinfection tunnel for 3-5secs after handwash,before entering the market ! Thanks to #YI #CII #TiruppurCoronaFighters for support ! pic.twitter.com/D0hWWqjBnl
— Vijayakarthikeyan K (@Vijaykarthikeyn) April 1, 2020
ಈ ಸೋಂಕು ನಿವಾರಕ ಘಟಕವನ್ನು ಕಾನ್ಫಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ ಸಂಘಟನೆಯ ಭಾಗವಾದ ಯೂತ್ ಇಂಡಿಯನ್ ಹಾಗೂ ತಿರುಪ್ಪುರ್ ಜಿಲ್ಲಾಡಳಿತದ ಸಹಯೋಗದಿಂದ ಸ್ಥಾಪನೆ ಮಾಡಲಾಗಿದೆ. ಮೂಲಭೂತವಾಗಿ ಅವಶ್ಯಕವಿರುವ ಮುಂಜಾಗ್ರತೆಯನ್ನು ಮಾತ್ರ ಇಲ್ಲಿ ಕೈಗೊಳ್ಳಲಾಗಿದೆ.
ನಿನ್ನೆ ಒಂದೇ ದಿನದಲ್ಲಿ 110 ಕೊರೊನಾ ಸೋಂಕಿತರು ದೃಢಪಟ್ಟಿದ್ದು ತಮಿಳುನಾಡು ಆತಂಕಕ್ಕೀಡಾಗಿತ್ತು. ಇದರಿಂದಾಗಿ ತಮಿಳುನಾಡಿನಲ್ಲಿ ಕೊರೊನಾ ಪೀಡಿತರ ಸಂಖ್ಯೆ 234ಕ್ಕೆ ಏರಿಕೆಯಾಗಿತ್ತು.