ETV Bharat / bharat

ಶಹೀನ್ ಬಾಗ್​ ಪ್ರತಿಭಟನೆ ಹಿಂದೆ ಪಾಕಿಸ್ತಾನ ಕೈವಾಡ: ಹಿಂದೂ ಮಹಾಸಭಾ ಆರೋಪ - ಪ್ರತಿಭಟನೆ ಹಿಂದೆ ಪಾಕಿಸ್ತಾನದ ಕೈವಾಡ

ರಾಷ್ಟ್ರ ರಾಜಧಾನಿಯಲ್ಲಿ ಶಹೀನ್ ಬಾಗ್​ನಲ್ಲಿ ನಡೆದ ಸಿಎಎ ವಿರುದ್ಧದ ಪ್ರತಿಭಟನೆ ಹಿಂದೆ ಪಾಕಿಸ್ತಾನದ ಕೈವಾಡ ಇರುವಂತೆ ತೋರುತ್ತದೆ ಎಂದು ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಆರೋಪಿಸಿದ್ದಾರೆ.

Pak role in Shaheen Bagh protest,ಶಹೀನ್ ಭಾಗ್​ ಪ್ರತಿಭಟನೆ ಹಿಂದೆ ಪಾಕಿಸ್ತಾನ ಕೈವಾಡ
ಹಿಂದೂ ಮಹಾಸಭಾ ಆರೋಪ
author img

By

Published : Jan 16, 2020, 9:59 AM IST

ನವದೆಹಲಿ: ಶಹೀನ್ ಬಾಗ್​ನಲ್ಲಿ ನಡೆದ ಸಿಎಎ ವಿರುದ್ಧದ ಪ್ರತಿಭಟನೆ ಹಿಂದೆ ಪಾಕಿಸ್ತಾನದ ಕುಮ್ಮಕ್ಕಿದೆ ಎಂದು ಹಿಂದೂ ಮಹಾಸಭಾ ಆರೋಪಿಸಿದೆ.

ಈ ಬಗ್ಗೆ ಮಾತನಾಡಿರುವ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ, ಅವರ ಪ್ರತಿಭಟಿಸುವ ಹಕ್ಕನ್ನ ನಾವು ವಿರೋಧಿಸುತ್ತಿಲ್ಲ. ಆದರೆ ಪ್ರತಿಭಟನೆಯ ಹೆಸರಿನಲ್ಲಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಇದನ್ನ ನಾವು ವಿರೋಧಿಸುತ್ತೇವೆ. ಈ ಪ್ರತಿಭಟನೆ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎಂದು ತೋರುತ್ತದೆ. ಈ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ತನಿಖೆ ನಡೆಸಬೇಕು ಎಂದಿದ್ದಾರೆ.

ಈ ದೇಶ ನಿಮ್ಮದು, ಇಲ್ಲಿನ ಜನ ನಿಮ್ಮವರು. ಶಹೀನ್ ಬಾಗ್​ ಜನರು ಗಮನ ಸೆಳೆಯಬೇಕು ಎಂದಿದ್ದರೆ ರಾಮ್​ ಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸಬಹುದಿತ್ತು. ಆದರೆ ಅದರ ಹಿಂದಿನ ಉದ್ದೇಶವೇ ಬೇರೆ ಇದೆ ಎಂದು ತೋರುತ್ತದೆ ಎಂದಿದ್ದಾರೆ. ಈ ಬಗ್ಗೆ ಹಿಂದೂ ಮಹಾಸಭಕ್ಕೆ ಹಲವಾರು ದೂರುಗಳು ಬಂದಿವೆ. ನಾವು ಕೂಡ ಆದಷ್ಟು ಶೀಘ್ರವೆ ಶಹೀನ್ ಬಾಗ್​ಗೆ ಭೇಟಿ ನೀಡಿ ಈ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಚಕ್ರಪಾಣಿ ತಿಳಿಸಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.