ಹೈದರಾಬಾದ್: ಡ್ರ್ಯಾಗನ್ ದೇಶ ಚೀನಾ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರ ಟಿಕ್ಟಾಕ್, ಯುಸಿ ಬ್ರೌಸರ್ ಸೇರಿ 59 ಆ್ಯಪ್ಗಳನ್ನ ನಿಷೇಧ ಮಾಡಿ ಆದೇಶ ಹೊರಹಾಕಿದೆ. ಈಗಾಗಲೇ ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಸ್ಟೋರ್ಗಳಿಂದ ಈ ಎಲ್ಲ ಆ್ಯಪ್ ಕಣ್ಮರೆಯಾಗಿದ್ದು, ಇದರ ಮಧ್ಯೆ ಮೊಬೈಲ್ನಲ್ಲಿರುವ ಆ್ಯಪ್ ಕೂಡ ಓಪನ್ ಆಗ್ತಿಲ್ಲ.
ಈಗಾಗಲೇ ಫೋನ್ಗಳಲ್ಲಿ ಡೌನ್ಲೋಡ್ ಆಗಿರುವ ಆ್ಯಪ್ ಇದೀಗ ಓಪನ್ ಆಗುತ್ತಿಲ್ಲ. ಮೊಬೈಲ್ನಲ್ಲಿರುವ ಟಿಕ್ಟಾಕ್ ಆ್ಯಪ್ ಓಪನ್ ಮಾಡಿದಾಗ 'Network Error' ಎಂದು ತೊರಿಸುತ್ತಿದೆ. ಪ್ರಿಯ ಬಳಕೆದಾರರೇ, ಭಾರತದ ಸರ್ಕಾರದ ನಿರ್ದೇಶನದಂತೆ ನಾವು 59 ಅಪ್ಲಿಕೇಶನ್ ನಿರ್ಬಂಧಿಸಿದ್ದೇವೆ ಎಂಬ ಸಂದೇಶ ಕೂಡ ಬರುತ್ತಿದೆ. ಈ ಆ್ಯಪ್ ಬಳಕೆ ಮಾಡಿರುವ ಎಲ್ಲರ ಗೌಪ್ಯತೆ ಮತ್ತು ಸುರಕ್ಷತೆ ಕಾಪಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂಬ ಮಾಹಿತಿ ಕೂಡ ಬರುತ್ತಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಟಿಕ್ಟಾಕ್ ಇಂಡಿಯಾ, ಕೇಂದ್ರ ಸರ್ಕಾರೆ ಆದೇಶ ಪಾಲಿಸುವುದಾಗಿ ಹೇಳಿದ್ದು, ಟಿಕ್ಟಾಕ್ ಬಳಕೆದಾರರ ಮಾಹಿತಿ ಯಾವುದೇ ದೇಶದೊಂದಿಗೆ ಹಂಚಿಕೊಂಡಿಲ್ಲ ಎಂದು ತಿಳಿಸಿದೆ.