ETV Bharat / bharat

ಅಕ್ರಮ ಗಣಿಗಾರಿಕೆ ವೇಳೆ ಗಣಿ ಕುಸಿದು ಮೂವರು ಮಹಿಳೆಯರ ದುರ್ಮರಣ - ಗಣಿ ಕುಸಿದು ಮೂವರು ಸಾವು

ಗಣಿಗಾರಿಕೆ ವೇಳೆ ಗಣಿ ಕುಸಿದು ಮೂವರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ.

illegal mining in Jharkhand
illegal mining in Jharkhand
author img

By

Published : Oct 5, 2020, 9:08 PM IST

ರಾಂಚಿ: ಜಾರ್ಖಂಡನ ಜಮ್ತಾರ್​ ಜಿಲ್ಲೆಯ ನಾರಾಯಣಪುರ ಬ್ಲಾಕ್​​ನಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ವೇಳೆ ಏಕಾಏಕಿ ಗಣಿ ಕುಸಿದು ಮೂವರು ಮಹಿಳೆಯರು ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದೆ.

ಗಣಿಗಾರಿಕೆ ನಡೆಸುತ್ತಿದ್ದ ವೇಳೆ, ಮಹಿಳೆಯರು ಬಿಳಿ ಮಣ್ಣು ಹೊರತೆಗೆಯುವ ಕೆಲಸದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ಜೆಸಿಬಿ ಯಂತ್ರಗಳ ಸಹಾಯದಿಂದ ಈಗಾಗಲೇ ಮೃತದೇಹ ಹೊರತೆಗೆಯಲಾಗಿದ್ದು, ಸ್ಥಳೀಯರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ.

ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಇದರಲ್ಲಿ ಮತ್ತಷ್ಟು ಜನರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಶಾಸಕ ಇರ್ಫಾನ್​​ ಅನ್ಸಾರಿ ಭೇಟಿ ಮಾಹಿತಿ ಪಡೆದುಕೊಂಡಿದ್ದಾರೆ. ಜತೆಗೆ ಮೃತ ಕುಟುಂಬಗಳಿಗೆ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಅಕ್ರಮ ಗಣಿಗಾರಿಕೆ ಕುರಿತು ಈಗಾಗಲೇ ಈಟಿವಿ ಭಾರತ ವರದಿ ಪ್ರಸಾರ ಮಾಡಿದ್ದರೂ, ಜಿಲ್ಲಾಡಳಿತ ಯಾವುದೇ ರೀತಿಯ ಕ್ರಮ ಕೈಗೊಂಡಿರಲಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.