ನವದೆಹಲಿ: ಕಳೆದ 45 ವರ್ಷಗಳ ಬಳಿಕ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಭಾರತ ಮತ್ತು ಚೀನಾ ಸೈನಿಕರ ನಡುವೆ 20 ದಿನಗಳಲ್ಲಿ ಪೂರ್ವ ಲಡಾಖ್‌ನಲ್ಲಿ ಕನಿಷ್ಠ ಮೂರು ಬಾರಿ ಗುಂಡಿನ ಚಕಮಕಿ ನಡೆದಿವೆ.
"ಆಗಸ್ಟ್ 29-31ರ ನಡುವೆ ಸದರ್ನ್ ಬ್ಯಾಂಕ್ ಆಫ್ ಪಾಂಗೊಂಗ್ ಸರೋವರದ ಬಳಿ ಪರ್ವತವನ್ನು ಆಕ್ರಮಿಸುವ ಚೀನಾ ಪ್ರಯತ್ನವನ್ನು ಭಾರತೀಯ ಸೇನೆ ತಡೆದಾಗ ಮೊದಲ ಘಟನೆ ನಡೆದಿದೆ. ಎರಡನೇ ಘಟನೆ ಸೆಪ್ಟೆಂಬರ್ 7 ರಂದು ಮುಖ್ಪಾರಿ ಎತ್ತರದ ಬಳಿ ಸಂಭವಿಸಿದೆ" ಎಂದು ಸೇನೆಯ ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 8 ರಂದು ಪಾಂಗೊಂಗ್ ಸರೋವರದ ಉತ್ತರದ ದಂಡೆಯ ಬಳಿ ಮೂರನೇ ಘಟನೆ ಸಂಭವಿಸಿದೆ. ಚೀನಾದ ಕಡೆಯವರು ಅತ್ಯಂತ ಆಕ್ರಮಣಕಾರಿ ರೀತಿಯಲ್ಲಿ ವರ್ತಿಸುತ್ತಿರುವುದರಿಂದ ಎರಡೂ ಕಡೆಯ ಸೈನಿಕರು 100 ಕ್ಕೂ ಹೆಚ್ಚು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿವೆ.
ಭಾರತ ಮತ್ತು ಚೀನಾ ದೇಶಗಳು ಏಪ್ರಿಲ್ ಮತ್ತು ಮೇ ತಿಂಗಳಿನಿಂದ ಮಿಲಿಟರಿ ಹಾಗೂ ರಾಜತಾಂತ್ರಿಕ ಮಟ್ಟಗಳಲ್ಲಿ ಅನೇಕ ಸುತ್ತಿನ ಮಾತುಕತೆಗಳನ್ನು ನಡೆಸಿವೆ. ಆದರೆ ಇದುವರೆಗೂ ಇದು ಯಾವುದೇ ಮಹತ್ವದ ಫಲಿತಾಂಶ ಹೊರಬಂದಿಲ್ಲ.