ಜಮ್ಮು: ಪೂಂಚ್ ಜಿಲ್ಲೆಯಲ್ಲಿ ಅನುಮಾನಾಸ್ಪದವಾಗಿ ವಾಟ್ಸ್ಆ್ಯಪ್ ಬಳಸಿದ್ದಕ್ಕಾಗಿ ಸೇನೆಯ ಪೋರ್ಟರ್‌ಗಳಾಗಿ ಕೆಲಸ ಮಾಡುತ್ತಿದ್ದ ಮೂವರು ಸ್ಥಳೀಯರನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ.
ಪೂಂಚ್ ಜಿಲ್ಲೆಯ ಭೀಂಬರ್ ಗಾಲಿ ಪ್ರದೇಶದ ಸೇನಾ ಘಟಕದಲ್ಲಿ ಈ ಮೂವರು ಪೋರ್ಟರ್‌ಗಳಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಾಡಿಕೆಯ ಮೇಲ್ವಿಚಾರಣೆಯ ಸಮಯದಲ್ಲಿ ಇವರು ಅನುಮಾನಾಸ್ಪದ ರೀತಿಯಲ್ಲಿ ವಾಟ್ಸ್ಆ್ಯಪ್ ಬಳಸಿರುವುದು ಕಂಡುಬಂದಿದೆ. ಅವರ ವಾಟ್ಸ್ಆ್ಯಪ್ ಬಳಕೆಯನ್ನು ಎಂದು ಪರಿಗಣಿಸಲಾಗಿದ್ದು, ಅವರ ವಾಟ್ಸ್ಆ್ಯಪ್ ಸಂಖ್ಯೆ ಕೆಲವು ಅನುಮಾನಾಸ್ಪದ ಗ್ರೂಪ್ಗಳಲ್ಲಿರುವುದು ಕಂಡು ಬಂದಿದೆ. ವಿಚಾರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.