ಮುಂಬೈ(ಮಹಾರಾಷ್ಟ್ರ): ಕಳ್ಳತನದ ಆರೋಪದಲ್ಲಿ ಬಂಧಿಸಲಾಗಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಹೀಗಾಗಿ ನ್ಯಾಯಾಧೀಶರು, ಪೊಲೀಸರು ಸೇರಿದಂತೆ 22 ಮಂದಿಯನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.
ಏಪ್ರಿಲ್ 21 ರಂದು ಗೋರೆಗಾಂವ್ ಉಪನಗರ ವ್ಯಾಪ್ತಿಯ ಬಂಗೂರ್ ನಗರದಲ್ಲಿ ಲಾಕ್ಡೌನ್ ಸಮಯದಲ್ಲಿ ಸಿಗರೇಟ್ ಪ್ಯಾಕೇಟ್ ಕದಿಯಲು ಮುಚ್ಚಿದ ಅಂಗಡಿಯೊಳಗೆ ವ್ಯಕ್ತಿ ನುಗ್ಗಿದ್ದ. ಆದರೆ, ಪೊಲೀಸ್ ಗಸ್ತು ತಂಡವು ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು.
ಮರುದಿನ ಬೆಳಗ್ಗೆ ಆರೋಪಿಯನ್ನು ಉಪನಗರ ನ್ಯಾಯಾಲಯದಲ್ಲಿ ಹಾಲಿಡೇ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು. ಪೊಲೀಸ್ ವಶಕ್ಕೆ ಪಡೆದ ಆರೋಪಿಗಳನ್ನು ಥಾಣೆ ಸೆಂಟ್ರಲ್ ಜೈಲಿಗೆ ಕರೆದೊಯ್ಯಲಾಯ್ತು. ಆದರೆ, ಥಾಣೆ ಜೈಲು ತುಂಬಿದ್ದರಿಂದ ರಾಯ್‌ಗಡ್‌ನ ತಾಲೋಜ ಕೇಂದ್ರ ಜೈಲಿಗೆ ಕರೆದೊಯ್ಯಲಾಯಿತು.
ಕೊರೊನಾ ಪರೀಕ್ಷೆಗೆ ನಡೆಸದೆ ಆರೋಪಿಯನ್ನು ಜೈಲಿನ ಒಳಗೆ ಕರೆದುಕೊಳ್ಳಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಹೀಗಾಗಿ ಪರೀಕ್ಷೆ ನಡೆಸಿದಾಗ ಆರೋಪಿಗೆ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಅವರ ಆತಂಕಕ್ಕೆ ಕಾರಣವಾಗಿದೆ. ಆರೋಪಿ ಜೊತೆ ಸಂಪರ್ಕಕ್ಕೆ ಬಂದಿದ್ದ 12ಕ್ಕೂ ಹೆಚ್ಚು ಪೊಲೀಸರು, ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಸಿಬ್ಬಂದಿ ಸೇರಿ 22 ಮಂದಿಯನ್ನು ಹೋಂ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.