ETV Bharat / bharat

ಮದುವೆಯಾದ ನಾಲ್ಕೇ ದಿನಕ್ಕೆ ಆತ್ಮಹತ್ಯೆ ಮಾಡಿಕೊಂಡ ನವಜೋಡಿ... ಲವರ್ಸ್​ಗಳ ದುರಂತ ಅಂತ್ಯ! - ನವಜೋಡಿ ಆತ್ಮಹತ್ಯೆ

ಪರಸ್ಪರ ಪ್ರೀತಿಸಿ ಮದುವೆ ಮಾಡಿಕೊಂಡಿದ್ದ ನವಜೋಡಿ ನಾಲ್ಕೇ ದಿನಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದು, ಅನೇಕ ಅನುಮಾನಗಳಿಗೆ ಕಾರಣವಾಗಿದೆ.

bride and groom committed suicide
bride and groom committed suicide
author img

By

Published : Jul 4, 2020, 5:38 PM IST

ಗಾಜಿಯಾಬಾದ್​: ಮದುವೆಯಾಗಿ ಕೇವಲ ನಾಲ್ಕು ದಿನದಲ್ಲಿ ನವಜೋಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

bride and groom committed suicide
ಆತ್ಮಹತ್ಯೆ ಮಾಡಿಕೊಂಡ ನವಜೋಡಿ

ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ವಿಶಾಲ್​ ಹಾಗೂ ನಿಶಾ ನಾಲ್ಕು ದಿನಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಮದುವೆಯಾದ ಮರು ದಿನವೇ ಬೆಳಗ್ಗೆ ವಿಶಾಲ್ ಮೃತದೇಹ ರೈಲ್ವೆ ಹಳಿ ಮೇಲೆ ಪತ್ತೆಯಾಗಿದೆ. ಕೌಟುಂಬಿಕ ತೊಂದರೆಯಿಂದ ಈತ ಸೂಸೈಡ್​ ಮಾಡಿಕೊಂಡಿದ್ದಾನೆಂದು ಹೇಳಲಾಗುತ್ತಿದೆ. ಗಂಡ ಸಾವನ್ನಪ್ಪಿದ ಖಿನ್ನತೆಯಲ್ಲೇ ನಿಶಾ ಕೂಡ ಮೂರು ದಿನದ ಬಳಿಕ ರಾತ್ರಿ ಮನೆಯಲ್ಲಿನ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇವರಿಬ್ಬರ ಸಾವಿಗೆ ಇಲ್ಲಿಯವರೆಗೆ ಯಾವುದೇ ರೀತಿಯ ಖಚಿತ ಕಾರಣ ತಿಳಿದು ಬಂದಿಲ್ಲ.

ಗಾಜಿಯಾಬಾದ್​ನ ಖಾಸಗಿ ಕಾಲೇಜ್​ನಲ್ಲಿ ವಿಶಾಲ್​ ಶಿಕ್ಷಕನಾಗಿದ್ದು, ನಿಶಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಇವರು ಪರಸ್ಪರ ಪ್ರೀತಿಸುತ್ತಿದ್ದ ಕಾರಣ ಎರಡೂ ಮನೆಯವರು ಒಪ್ಪಿಕೊಂಡು ಮದುವೆ ಮಾಡಿಸಿದ್ದರು. ನಿಗೂಢವಾಗಿ ಸಾವನ್ನಪ್ಪಿರುವುದು ಎರಡೂ ಕುಟುಂಬಗಳಲ್ಲಿ ದುಃಖ ಮಡುಗಟ್ಟಿದೆ.

ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಇಲ್ಲಿಯವರೆಗೆ ಯಾವುದೇ ರೀತಿಯ ದಾಖಲೆ ಲಭ್ಯವಾಗಿಲ್ಲ. ನಿಶಾ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.