ETV Bharat / bharat

ಸಿಎಎ ಜಾರಿಗೊಳಿಸದಿರಲು ತೆಲಂಗಾಣ ಸರ್ಕಾರದ ನಿರ್ಣಯ.. - ತೆಲಂಗಾಣ ಸಚಿವ ಸಂಪುಟ ಸಭೆ

ಮುಂದಿನ ವಿಧಾನ ಮಂಡಲ ಕಲಾಪದ ಸಂದರ್ಭದಲ್ಲಿ ಪೌರತ್ವ ತಿದ್ದಪಡಿ ಕಾಯ್ದೆ (ಸಿಎಎ) ಜಾರಿ ತಡೆಯಲು ನಿರ್ಣಯ ಕೈಗೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

Telangana cabinet resolution seeking to abolish CAA
ತೆಲಂಗಾಣದಲ್ಲೂ ಸಿಎಎ ಜಾರಿ ಮಾಡದಿರಲು ನಿರ್ಧಾರ
author img

By

Published : Feb 17, 2020, 7:07 AM IST

ತೆಲಂಗಾಣ : ರಾಜ್ಯದಲ್ಲಿ ಸಿಎಎ ಜಾರಿ ಮಾಡದಂತೆ ಕೋರಿ ಕೇಂದ್ರ ಸರ್ಕಾರಕ್ಕೆ ತೆಲಂಗಾಣ ಸರ್ಕಾರ ಮನವಿ ಮಾಡಿದೆ.

ಮುಂದಿನ ವಿಧಾನ ಮಂಡಲ ಕಲಾಪದ ಸಂದರ್ಭದಲ್ಲಿ ಪೌರತ್ವ ತಿದ್ದಪಡಿ ಕಾಯ್ದೆ (ಸಿಎಎ) ಜಾರಿ ತಡೆಯಲು ನಿರ್ಣಯ ಕೈಗೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಪೌರತ್ವವನ್ನು ಧರ್ಮದ ಆಧಾರದಲ್ಲಿ ನೀಡುವುದು ಸಂವಿಧಾನ ಬಾಹಿರ ಮತ್ತು ಈ ಕಾಯ್ದೆಯನ್ನು ಈಗಾಗಲೇ ಕೇರಳ, ಪಂಜಾಬ್​, ರಾಜಸ್ಥಾನ, ಪಶ್ಚಿಮ ಬಂಗಾಳ ಸರ್ಕಾರಗಳು ಜಾರಿಗೊಳಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿವೆ. ಹಾಗಾಗಿ ತೆಲಂಗಾಣದಲ್ಲೂ ಈ ವಿವಾದಿತ ಕಾಯ್ದೆ ಜಾರಿ ಮಾಡದಿರಲು ನಿರ್ಧರಿಸಲಾಗಿದೆ. ತೆಲಂಗಾಣವೂ ಇಂತಹ ನಿರ್ಧಾರಕ್ಕೆ ಬಂದಿರುವುದು ಕೇಂದ್ರ ಸರ್ಕಾರಕ್ಕೆ ಸಿಎಎ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.