ಸಿದ್ದಿಪೇಟೆ (ತೆಲಂಗಾಣ): ಎಸ್.ಎಸ್.ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ 'ಆರ್‌ಆರ್‌ಆರ್' ಚಲನಚಿತ್ರದಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು ಎಂದು ರಾಜಮೌಳಿ ಅವರಿಗೆ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಎಚ್ಚರಿಕೆ ನೀಡಿದ್ದಾರೆ.
"ರಾಜಮೌಳಿ ಅವರ ಚಲನಚಿತ್ರದಲ್ಲಿ 'ಕೋಮರಂ ಭೀಮ್' ಮೇಲೆ ಟೋಪಿ (ಮುಸ್ಲಿಂ ಟೋಪಿ) ಇಟ್ಟಿರುವ ಕ್ರಿಯೆಯನ್ನು ನಾವು ವಿರೋಧಿಸುತ್ತಿದ್ದೇವೆ. ಬುಡಕಟ್ಟು ಜನಾಂಗದವರಾದ ಕೋಮರಂ ಭೀಮ್ ಮೇಲೆ ಟೋಪಿ ಹಾಕಿದ್ದಾರೆ. ಆದರೆ, ಇತರ ಜನರಿಗೆ ಸಿಂಧೂರ ಇಡುವ ಧೈರ್ಯವಿದೆಯೇ?" ಎಂದು ಬಂಡಿ ಸಂಜಯ್ ಪ್ರಶ್ನಿಸಿದ್ದಾರೆ.
"ಈ ಚಲನಚಿತ್ರವು ಬುಡಕಟ್ಟು ಜನರ ಭಾವನೆಗಳನ್ನು ನೋಯಿಸುತ್ತದೆ. ನಾವು ಬುಡಕಟ್ಟು ಜನರನ್ನು ಗೌರವಿಸುತ್ತೇವೆ, ಅದು ನಮ್ಮ ಸಂಪ್ರದಾಯವಾಗಿದೆ. ಭಾವನೆಗಳನ್ನು ನೋಯಿಸಿದರೆ ನಾವು ಯಾರನ್ನೂ ಉಳಿಸಲು ಸಾಧ್ಯವಿಲ್ಲ. ನಾವು ಜೂನಿಯರ್ ಎನ್‌ಟಿಆರ್, ರಾಮ್ ಚರಣ್ ಅಥವಾ ಚಲನಚಿತ್ರದಲ್ಲಿನ ಯಾವುದೇ ನಟನ ವಿರುದ್ಧವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಒಂದು ಸಮುದಾಯದ ಭಾವನೆಗಳನ್ನು ನೋಯಿಸುವ ಪ್ರವೃತ್ತಿಯನ್ನು ನಾವೆಲ್ಲರೂ ವಿರೋಧಿಸಬೇಕು"ಎಂದು ಹೇಳಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ಕೋಮರಂ ಭೀಮ್ ಪಾತ್ರವನ್ನ ಜೂ. NTR ನಿಭಾಯಿಸುತ್ತಿದ್ದಾರೆ. ಆದರೆ ಆ ಪಾತ್ರವನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ. ಮುಸ್ಲಿಂ ವ್ಯಕ್ತಿಯ ಗೆಟಪ್‌ನಲ್ಲಿ ಜೂ. ಎನ್‌ಟಿಆರ್ ಅವರನ್ನು ತೋರಿಸಲಾಗಿದೆ. ಇದೇ ಈಗ ವಿವಾದಕ್ಕೆ ಕಾರಣ ಆಗಿದೆ.