ETV Bharat / bharat

ನೀಟ್ ಪರೀಕ್ಷೆಯ ಭಯದಿಂದ ಆತ್ಮಹತ್ಯೆ ಮಾಡಿಕೊಂಡ ಯುವತಿ! - ಯುವತಿ ಆತ್ಮಹತ್ಯೆ

ನೀಟ್ ಪರೀಕ್ಷೆಯಲ್ಲಿ ಪಾಸ್ ಆಗುವುದಿಲ್ಲ ಎಂಬ ಭಯದಿಂದ ತಮಿಳುನಾಡಿನ ಯುವತಿಯೊಬ್ಬಳು ಪರೀಕ್ಷೆಗೆ ಒಂದು ದಿನ ಮೊದಲು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

suicide
suicide
author img

By

Published : Sep 12, 2020, 1:48 PM IST

ಮಧುರೈ (ತಮಿಳುನಾಡು): ವೈದ್ಯಕೀಯ ಅಧ್ಯಯನದ ಅರ್ಹತಾ ಪರೀಕ್ಷೆ ನೀಟ್​ನಲ್ಲಿ ಪಾಸ್ ಆಗುವುದಿಲ್ಲ ಎಂಬ ಭಯದಿಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಜ್ಯೋತಿ ಶ್ರೀ ದುರ್ಗಾ (19) ಮಧುರೈನ ತನ್ನ ಮನೆಯಲ್ಲಿ ಫ್ಯಾನ್​ಗೆ ನೇಣು ಬಿಗಿದುಕೊಂಡು ಪರೀಕ್ಷೆಗೆ ಒಂದು ದಿನ ಮೊದಲು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ತಲ್ಲಕುಲಂನಲ್ಲಿರುವ ಆಕೆಯ ಮನೆಯಲ್ಲಿ ಪತ್ತೆಯಾದ ಆತ್ಮಹತ್ಯೆ ಪತ್ರದಲ್ಲಿ, "ನನ್ನ ಕುಟುಂಬವು ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದೆ ಮತ್ತು ನನಗೆ ಆದ್ಯತೆಯ ಕಾಲೇಜಿನಲ್ಲಿ ಸ್ಥಾನ ಸಿಗದಿದ್ದರೆ, ಕುಟುಂಬದ ಕಠಿಣ ಪರಿಶ್ರಮ ವ್ಯರ್ಥವಾಗುತ್ತದೆ ಕ್ಷಮಿಸಿ" ಎಂದು ಬರೆದಿದ್ದಾಳೆ.

ಆಕೆಯ ತಂದೆ ಮುರುಗ ಸುಂದರಂ ಸಬ್ ಇನ್ಸ್‌ಪೆಕ್ಟರ್ ಆಗಿದ್ದಾರೆ. ಕಳೆದ ಒಂದು ವಾರದಿಂದ ದುರ್ಗಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದರಿಂದ ಕಳೆದ ವರ್ಷ ದಾಖಲಾಗಲು ಅವಳು ವಿಫಲಳಾಗಿದ್ದಳು. ಮಧುರೈ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.