ETV Bharat / bharat

ಅಕ್ಟೋಬರ್​ ಕೊನೆಯವರೆಗೆ ಲಾಕ್​ಡೌನ್​ ವಿಸ್ತರಣೆ ಮಾಡಿದ ತಮಿಳುನಾಡು! - ಲಾಕ್​ಡೌನ್​ ವಿಸ್ತರಣೆ ಮಾಡಿದ ತಮಿಳುನಾಡು

ಕೊರೊನಾ ಸೋಂಕಿತ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ತಮಿಳುನಾಡಿನಲ್ಲಿ ಅಕ್ಟೋಬರ್​ ಕೊನೆಯವರೆಗೆ ಲಾಕ್​ಡೌನ್​ ವಿಸ್ತರಣೆ ಮಾಡಿ ಘೋಷಣೆ ಮಾಡಲಾಗಿದೆ.

Tamil Nadu CM
Tamil Nadu CM
author img

By

Published : Sep 29, 2020, 8:53 PM IST

ಚೆನ್ನೈ: ಕೊರೊನಾ ವೈರಸ್​ ಹೆಚ್ಚುತ್ತಿರುವ ಕಾರಣ ತಮಿಳುನಾಡಿನಲ್ಲಿ ಅಕ್ಟೋಬರ್​ ಕೊನೆಯವರೆಗೆ ಲಾಕ್​ಡೌನ್​ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದ್ದು, ಇದರ ಮಧ್ಯೆ ಸಾರ್ವಜನಿಕರಿಗೆ ಮತ್ತಷ್ಟು ಸಡಿಲಿಕೆ ನೀಡಲಾಗಿದೆ. ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಮುಖ್ಯಮಂತ್ರಿ ಪಳನಿಸ್ವಾಮಿ, ಬೆಳಗ್ಗೆ 6ರಿಂದ 9ರವರೆಗೆ ಹೋಟೆಲ್​ ಓಪನ್​ ಮಾಡಲು ಅನುಮತಿ ನೀಡಲಾಗಿದ್ದು, ಪಾರ್ಸೆಲ್​ ಸೇವೆಗಳಿಗೆ ರಾತ್ರಿ 10ರವರೆಗೆ ಅವಕಾಶ ನೀಡಲಾಗಿದೆ ಎಂದಿದ್ದಾರೆ.

ಇದರ ಜತೆಗೆ 100 ಜನರೊಂದಿಗೆ ಸಿನಿಮಾ ಚಿತ್ರಿಕರಣಕ್ಕೆ ಅವಕಾಶ ನೀಡಲಾಗಿದ್ದು, ಚೆನ್ನೈ ವಿಮಾನ ನಿಲ್ದಾಣದ ವಿಮಾನಯಾನ ಸೇವೆ ಅಕ್ಟೋಬರ್​​ ಮೊದಲ ವಾರದಿಂದ ಮತ್ತಷ್ಟು ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ.

10,11 ಮತ್ತು 12ನೇ ತರಗತಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಶಿಕ್ಷಕರ ಮಾರ್ಗದರ್ಶನ ಪಡೆದುಕೊಳ್ಳಲು ಶಾಲೆಗೆ ಹೋಗಲು ಅವಕಾಶ ನೀಡಲಾಗಿದೆ. ಆದರೆ ಚಿತ್ರಮಂದಿರ, ಮನೋರಂಜನಾ ಉದ್ಯಾನಗಳು, ಈಜುಕೊಳ, ಕಡಲತೀರಗಳು ಬಂದ್​ ಇರಲಿವೆ.ರಾಜ್ಯದಲ್ಲಿ ಸದ್ಯ 46,281 ಸಕ್ರಿಯ ಪ್ರಕರಣಗಳಿವೆ. ಇಂದು 5,546 ಕೊರೊನಾ ಸೋಂಕು ಪ್ರಕರಣ ದಾಖಲಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.