ETV Bharat / bharat

ಚಿಯಾ ವಿಕ್ರಂ ಸಿನಿಮಾದಲ್ಲಿ 'ಧೂಳ್​' ಎಬ್ಬಿಸಿದ್ದ​ ನಟಿ, ಜಾನಪದ ಗಾಯಕಿ ಪರವೈ ಮುನಿಯಮ್ಮ ವಿಧಿವಶ - ಧೂಳ್

ಕಾಲಿವುಡ್​ನ ಹಿರಿಯ ನಟಿ ಹಾಗೂ ಜಾನಪದ ಗಾಯಕಿ ಪರವೈ ಮುನಿಯಮ್ಮ ಮಧುರೈನ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಇವರ ಅಗಲಿಕೆಗೆ ಸಿನಿಮಾ ಕ್ಷೇತ್ರದ ಕಲಾವಿದರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

paravai muniyamma
ಪರವೈ ಮುನಿಯಮ್ಮ
author img

By

Published : Mar 30, 2020, 8:28 AM IST

ಚೆನ್ನೈ: ತಮಿಳು ಜಾನಪದ ಗಾಯಕಿ, ನಟಿ ಪರವೈ ಮುನಿಯಮ್ಮ ಮಧುರೈನ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಇವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ವಿಕ್ರಮ್​​ ನಾಯಕ ನಟನಾಗಿ ಅಭಿನಯಿಸಿದ್ದ ಧೂಳ್​ ಚಿತ್ರದಲ್ಲಿ ತಾವು ನಿರ್ವಹಿಸಿದ್ದ ಪಾತ್ರದಿಂದ ಮನೆಮಾತಾಗಿದ್ದ ಇವರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಪಾತ್ರಗಳಿಗೆ ಜೀವ ತುಂಬಿದ್ದರು. 200ಕ್ಕೂ ಹೆಚ್ಚು ಜಾನಪದ ಗಾಯಕಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದರು.

ಪರವೈ ಮುನಿಯಮ್ಮ ಅವರ ಅಗಲಿಕೆಗೆ ನಟ ಹಾಗೂ ದಕ್ಷಿಣ ಭಾರತ ಕಲಾವಿದರ ಸಂಘದ ಮಾಜಿ ಅಧ್ಯಕ್ಷ ನಾಸಿರ್​​ ಸಂತಾಪ ಸೂಚಿಸಿದ್ದಾರೆ. ''ಪರವೈ ಮುನಿಯಮ್ಮ ಅವರ ಅಗಲಿಕೆಯಿಂದ ಸಿನಿಮಾ ಕ್ಷೇತ್ರಕ್ಕಿಂತ, ಜಾನಪದ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಸಿನಿಮಾ ಕಲಾವಿದರ ಪರವಾಗಿ ಸಂತಾಪ ಸೂಚಿಸುತ್ತೇನೆ. ಅವರ ಕುಟುಂಬಕ್ಕೆ ಈ ದುಃಖ ತಡೆದುಕೊಳ್ಳುವ ಶಕ್ತಿಯನ್ನು ದೇವರು ನೀಡಲೆಂದು ಪ್ರಾರ್ಥಿಸುತ್ತೇನೆ'' ಎಂದು​ ಸಂತಾಪ ಸೂಚಿಸಿದ್ದಾರೆ. ನಾಸಿರ್​​ ಜೊತೆಗೆ ಕಾಲಿವುಡ್​ನ ವಿವಿಧ ಕಲಾವಿದರು, ಗಣ್ಯರು ಪರವೈ ಮುನಿಯಮ್ಮ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.