ಶಾಂತಿನಿಕೇತನ (ಪ.ಬಂಗಾಳ) : ವಿಶ್ವಭಾರತಿ ವಿಶ್ವವಿದ್ಯಾನಿಲಯವು ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಸಾರ್ವತ್ರಿಕ ಭ್ರಾತೃತ್ವವನ್ನು ಹೆಚ್ಚಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನೊಬೆಲ್ ಪ್ರಶಸ್ತಿ ವಿಜೇತ ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್ ಸ್ಥಾಪಿಸಿದ ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಸಾರಸ್ವತ ಲೋಕದ ದಂತ ಕತೆಯಾಗಿರುವ ರವೀಂದ್ರನಾಥ್ ಟ್ಯಾಗೋರರ ಸ್ವಾವಲಂಬಿ ಭಾರತ ನಿರ್ಮಾಣದ ದೃಷ್ಟಿಕೋನ, ನಮ್ಮ ಸರ್ಕಾರದ "ಆತ್ಮ ನಿರ್ಭರ ಭಾರತ" ಉಪಕ್ರಮದ ಮೂಲತತ್ವವಾಗಿದೆ. ವಿಶ್ವ ಭಾರತಿ ದೇಶಕ್ಕೆ ನಿರಂತರ ಶಕ್ತಿಯ ಪೂಜ್ಯ ಮೂಲವಾಗಿದೆ ಎಂದರು.
ಓದಿ: 'ಸ್ವಜನ ಬಂಡವಾಳಶಾಹಿ'ಗಳಿಗಾಗಿ ಮೋದಿ ಹಣ ಸಂಪಾದಿಸುತ್ತಿದ್ದಾರೆ : ರಾಹುಲ್ ಗಾಂಧಿ
ಟ್ಯಾಗೋರ್ ಮತ್ತು ಅವರು ಸ್ಥಾಪಿಸಿದ ಸಂಸ್ಥೆ ರಾಷ್ಟ್ರೀಯತೆಯ ಮನೋಭಾವವನ್ನು ಬಲಪಡಿಸುವುದಲ್ಲದೆ, "ವಿಶ್ವ ಬಂಧುತ್ವ" (ಸಾರ್ವತ್ರಿಕ ಭ್ರಾತೃತ್ವ)ವನ್ನು ಹೆಚ್ಚಿಸಿದೆ ಎಂದು ಪ್ರಧಾನಿ ಹೇಳಿದರು. ಕಲೆ ಮತ್ತು ಸಾಹಿತ್ಯ, ವಿಜ್ಞಾನ ಮತ್ತು ನಾವೀನ್ಯತೆಗಳಂತಹ ವೈವಿಧ್ಯಮಯ ಕ್ಷೇತ್ರಗಳಲ್ಲಿನ ಗಮನಾರ್ಹ ಸಾಧನೆಗಳಿಗಾಗಿ ಸಂಸ್ಥೆಯನ್ನು ಶ್ಲಾಘಿಸಿದರು.