ETV Bharat / bharat

ಎಂಎನ್ಎಸ್ ಆಕ್ಷೇಪಕ್ಕೆ ಮಣಿದ ಟಿ -ಸಿರೀಸ್: ಅತೀಫ್ ಅಸ್ಲಂ ಹಾಡು ಡಿಲೀಟ್​ ಮಾಡಿದ ಸಂಗೀತ ಸಂಸ್ಥೆ - ಎನ್​ಎಂಎಸ್​

ಮ್ಯೂಸಿಕ್ ಲೇಬಲ್ ಮತ್ತು ಪ್ರೊಡಕ್ಷನ್ ಹೌಸ್ ಟಿ - ಸಿರೀಸ್ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಆಕ್ಷೇಪದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಗಾಯಕ ಅತೀಫ್ ಅಸ್ಲಂ ಅವರ ಹಾಡನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಿಂದ ತೆಗೆದುಹಾಕಿದೆ.

ಎಂಎನ್ಎಸ್ ಆಕ್ಷೇಪಕ್ಕೆ ಮಣಿದ ಟಿ-ಸಿರೀಸ್
ಎಂಎನ್ಎಸ್ ಆಕ್ಷೇಪಕ್ಕೆ ಮಣಿದ ಟಿ-ಸಿರೀಸ್
author img

By

Published : Jun 25, 2020, 12:27 PM IST

ಮುಂಬೈ: ಮ್ಯೂಸಿಕ್ ಲೇಬಲ್ ಮತ್ತು ಪ್ರೊಡಕ್ಷನ್ ಹೌಸ್ ಟಿ-ಸಿರೀಸ್ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಆಕ್ಷೇಪದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಗಾಯಕ ಅತೀಫ್ ಅಸ್ಲಂ ಅವರ ಹಾಡನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಿಂದ ತೆಗೆದುಹಾಕಿದೆ.

ಟಿ-ಸಿರೀಸ್ ಶನಿವಾರ ಅತೀಫ್ ಅವರ 'ಕಿನ್ನಾ ಸೋನಾ' ಹಾಡನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿತ್ತು. ಈ ವೇಳೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಂಎನ್ಎಸ್ ಚಿತ್ರಪತ್ ಸೇನಾ ಅಧ್ಯಕ್ಷ ಅಮೆಯಾ ಖೋಪ್ಕರ್ ವಿಡಿಯೋ ತೆಗೆದುಹಾಕಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

ಈ ಬಳಿಕ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆಗೆ ಪತ್ರ ಬರೆದಿರುವ ಟಿ- ಸಿರೀಸ್​ ಸಂಸ್ಥೆ, 'ತಿಳಿಯದೆ ನಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಹಾಡನ್ನು ಅಪ್ಲೋಡ್​​​​​​​ ಮಾಡಲಾಗಿದೆ. ನಮ್ಮ ಸಿಬ್ಬಂದಿಯೊಬ್ಬರು ತಿಳಿಯದೇ ಈ ತಪ್ಪು ಮಾಡಿದ್ದಾರೆ. ಇದನ್ನು ತೀವ್ರವಾಗಿ ವಿಷಾದಿಸುತ್ತೇವೆ ಮತ್ತು ಕ್ಷಮೆಯಾಚಿಸುತ್ತೇವೆ. ನಾವು ಪಾಕಿಸ್ತಾನಿ ಗಾಯಕರಿಗೆ ಸಹಾಯ ಮಾಡುವುದಿಲ್ಲ. ಅವರ ಹಾಡುಗಳನ್ನು ಪ್ರಚಾರ ಮಾಡುವುದಿಲ್ಲ' ಎಂದಿದ್ದಾರೆ.

  • 'टी-सिरीज'ने पाकिस्तानी कलाकाराचं गाणं प्रदर्शित केल्यानंतर पक्षाच्या चित्रपट शाखेचे अध्यक्ष @MNSAmeyaKhopkar ह्यांनी तीव्र आक्षेप नोंदवला. महाराष्ट्र नवनिर्माण सेनेच्या रोषाला सामोरं जावं लागेल म्हणून व्यवस्थापनाने चूक मान्य करत भारतीयांची जाहीर माफी मागितली आहे. #मनसेदणका pic.twitter.com/etJmTNYXQj

    — MNS Tweets (@manaseit) June 24, 2020 " class="align-text-top noRightClick twitterSection" data=" ">

2019ರಲ್ಲಿ ನಡೆದ ಪುಲ್ವಾಮ ಭಯೋತ್ಪಾದಕ ದಾಳಿ ಬಳಿಕ ಪಾಕಿಸ್ತಾನದ ಗಾಯಕರೊಂದಿಗೆ ಕೆಲಸ ಮಾಡುವುದನ್ನು ನಿಲ್ಲಿಸುವಂತೆ ಎಂಎನ್‌ಎಸ್ ಸಂಗೀತ ಕಂಪನಿಗಳಿಗೆ ಸೂಚಿಸಿತ್ತು. ಅಷ್ಟೇ ಅಲ್ಲದೆ, 2016ರಲ್ಲಿ ನಡೆದ ಉರಿ ದಾಳಿ ಬಳಿಕ ಪಾಕಿಸ್ತಾನಿ ನಟರು ಭಾರತೀಯ ಚಿತ್ರರಂಗದಲ್ಲಿ ನಟಿಸಬಾರದು ಎಂದು ನಿಷೇಧ ಹೇರಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.