ETV Bharat / bharat

ಕತ್ತಿಗೆ ಕತ್ತಿ, ಕಲ್ಲಿಗೆ ಕಲ್ಲು... ಪೌರತ್ವ ಕಾಯ್ದೆ ವಿರೋಧಿಸುವವರಿಗೆ ರಾಜ್​ ಠಾಕ್ರೆ ಖಡಕ್​ ಸೂಚನೆ - ರಾಜ್​ ಠಾಕ್ರೆ ಹೇಳಿಕೆ ಸುದ್ದಿ

ಸಿಎಎ ಹಾಗೂ ಎನ್​ಆರ್​ಸಿ ವಿರೋಧಿಸಿ ದೇಶದೆಲ್ಲೆಡೆ ​ರ‍್ಯಾಲಿಗಳು ನಡೆಯುತ್ತಿವೆ. ಈ ರ‍್ಯಾಲಿಗಳಿಗೆ ನಾವು ಕೂಡಾ ರ‍್ಯಾಲಿ ನಡೆಸಿಯೇ ಉತ್ತರಿಸಿದ್ದೇವೆ. ಅಂತೆಯೇ ಕತ್ತಿಗೆ ಯಾವತ್ತೂ ಕತ್ತಿಯಿಂದಲೇ ಉತ್ತರಿಸ್ಬೇಕು. ಕಲ್ಲಿಗೆ ಕಲ್ಲಿನಿಂದಲೇ ಉತ್ತರ ನೀಡ್ಬೇಕು ಎಂದು ಸಿಎಎ ವಿರೋಧಿಗಳಿಗೆ ಠಾಕ್ರೆ ಖಡಕ್​ ಸೂಚನೆ ರವಾನಿಸಿದ್ದಾರೆ.

raj thackeray
ರಾಜ್​ ಠಾಕ್ರೆ
author img

By

Published : Feb 10, 2020, 4:19 AM IST

ಮುಂಬೈ: ಕತ್ತಿಗೆ ಕತ್ತಿಯಿಂದಲೇ ಉತ್ತರಿಸ್ಬೇಕು. ಅಂತೆಯೇ ಕಲ್ಲಿಗೆ ಕಲ್ಲಿನಿಂದಲೇ ಉತ್ತರ ನೀಡ್ಬೇಕು ಎಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವವರಿಗೆ ಎಂಎನ್​ಎಸ್​ ಮುಖ್ಯಸ್ಥ ರಾಜ್​ ಠಾಕ್ರೆ ಎಚ್ಚರಿಸಿದ್ದಾರೆ.

ವಾಣಿಜ್ಯ ನಗರಿ ಮುಂಬೈನಲ್ಲಿ ಸಿಎಎ ಬೆಂಬಲಿಸಿ ನಡೆದ ಮೆಗಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಹಾರಾಷ್ಟ್ರ ನವನಿರ್ಮಾಣ್​ ಸೇನಾ ಮುಖ್ಯಸ್ಥ ರಾಜ್​ ಠಾಕ್ರೆ, ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಆಂದೋಲನ ನಡೆಸುತ್ತಿರುವವರಿಗೆ ಖಡಕ್​ ಪ್ರತಿಕ್ರಿಯೆ ನೀಡಿದರು. ಸಿಎಎ ಹಾಗೂ ಎನ್​ಆರ್​ಸಿ ವಿರೋಧಿಸಿ ದೇಶದೆಲ್ಲೆಡೆ ​ರ‍್ಯಾಲಿಗಳು ನಡೆಯುತ್ತಿವೆ. ಈ ರ‍್ಯಾಲಿಗಳಿಗೆ ನಾವು ಕೂಡಾ ರ‍್ಯಾಲಿ ನಡೆಸಿಯೇ ಉತ್ತರಿಸಿದ್ದೇವೆ. ಅಂತೆಯೇ ಕತ್ತಿಗೆ ಯಾವತ್ತೂ ಕತ್ತಿಯಿಂದಲೇ ಉತ್ತರಿಸ್ಬೇಕು. ಕಲ್ಲಿಗೆ ಕಲ್ಲಿನಿಂದಲೇ ಉತ್ತರ ನೀಡ್ಬೇಕು ಎಂದು ಸಿಎಎ ವಿರೋಧಿಗಳಿಗೆ ಠಾಕ್ರೆ ಖಡಕ್​ ಸೂಚನೆ ರವಾನಿಸಿದ್ದಾರೆ.

ಇದೇ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟಿಸುತ್ತಿರುವ ಮುಸ್ಲಿಂರ ಬಗ್ಗೆ ಮಾತನಾಡಿದ ಅವರು, ಮುಸ್ಲಿಮರು ಆಂದೋಲನ ನಡೆಸುತ್ತಿರುವ ಉದ್ದೇಶವೇ ನನಗೆ ಅರ್ಥವಾಗುತ್ತಿಲ್ಲ. ಈ ಕಾಯ್ದೆಯು ಇಲ್ಲಿ ಹುಟ್ಟಿರುವ ಮುಸ್ಲಿಂ ನಾಗರಿಕರಿಗೆ ಸಂಬಂಧಿಸಿದ್ದೇ ಅಲ್ಲ ಎಂದರು.

ದೇಶದಲ್ಲಿರುವ ಅಕ್ರಮ ಬಾಂಗ್ಲಾ ಹಾಗೂ ಪಾಕ್​ನ ವಲಸಿಗರನ್ನು ದೇಶದಿಂದ ಹೊರಗೋಡಿಸಬೇಕು. ಎಲ್ಲರನ್ನೂ ದೇಶದಲ್ಲಿರಿಸಿಕೊಳ್ಳಲು ನಮ್ಮ ದೇಶವೇನು ಧರ್ಮಛತ್ರವೇ? ಅಕ್ರಮ ವಲಸಿಗರ ವಿರುದ್ಧ ಅಮೆರಿಕಾ ಹಾಗೂ ಯುರೋಪ್​ನಲ್ಲಿ ಕಾನೂನು ತುಂಬಾ ಬಲವಾಗಿದೆ. ಯಾರಲ್ಲಾದರೂ ಪಾಸ್​ಪೋರ್ಟ್​ ಇಲ್ಲದಿದ್ದರೆ, ಅವರನ್ನು ಗಡಿಪಾರು ಮಾಡಬೇಕು, ಇಲ್ಲವೇ ಜೈಲಿಗೆ ಹಾಕಬೇಕು. ಪ್ರತಿಯೊಬ್ಬರಿಗೆ ನಾವೂ ಜವಾಬ್ದಾರರಲ್ಲ ಎಂದು ಠಾಕ್ರೆ ಕೆಂಡಕಾರಿದ್ದಾರೆ.

Intro:Body:

https://www.aninews.in/news/national/politics/swords-for-swords-stone-for-stones-raj-thackeray-warns-anti-caa-protestors20200209224112/

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.