ETV Bharat / bharat

ಉನ್ನಾವೋ ಸಂತ್ರಸ್ತೆ ಹೆಸರು ಬಹಿರಂಗ ಮಾಡುವಂತಿಲ್ಲ: ಮಾಧ್ಯಮಗಳಿಗೆ ಸುಪ್ರೀಂ ಕಟ್ಟಪ್ಪಣೆ - ಸುಪ್ರೀಂಕೋರ್ಟ್

ಉನ್ನಾವೋ ಅತ್ಯಾಚಾರ ಪ್ರಕರಣ ಕುರಿತಾಗಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​, ಸಂತ್ರಸ್ತೆಯ ಹೆಸರನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರಕಟಿಸುವಂತಿಲ್ಲ ಎಂದು ಮಾಧ್ಯಮಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

Supreme Court
author img

By

Published : Aug 2, 2019, 12:13 PM IST

ನವದೆಹಲಿ: ಉನ್ನಾವೋ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಕಾಳಜಿ ವಹಿಸಿರುವ ಸುಪ್ರೀಂಕೋರ್ಟ್​, ಸಂತ್ರಸ್ತೆಯ ಹೆಸರನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರಕಟಿಸುವಂತಿಲ್ಲ ಎಂದು ಮಾಧ್ಯಮಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಇಂದು ಮತ್ತೆ ಪ್ರಕರಣದ ಕುರಿತಾಗಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​, ಅಪಘಾತದಲ್ಲಿ ಗಾಯಗೊಂಡಿರುವ ಸಂತ್ರಸ್ತೆ ಹಾಗೂ ಲಾಯರ್​ಗೆ ಲಖನೌನಲ್ಲಿಯೇ ಚಿಕಿತ್ಸೆ ಮುಂದುವರೆಸಲು ಅನುಮತಿ ನೀಡಿದೆ.

ವಿಚಾರಣೆ ಮೊದಲು ಸಂತ್ರಸ್ತೆಯನ್ನು ದೆಹಲಿಯ ಏಮ್ಸ್​ ಆಸ್ಪತ್ರೆಗೆ ರವಾನೆ ಮಾಡುವ ಬಗ್ಗೆ ಸುಪ್ರೀಂ ಸೂಚಿಸಿತ್ತು. ಆದರೆ ಆಕೆಗಿನ್ನೂ ಪ್ರಜ್ಞೆ ಬಾರದ ಕಾರಣ ಲಖನೌನಲ್ಲಿಯೇ ಚಿಕಿತ್ಸೆ ಮುಂದುವರೆಸಲು ಸಾಲಿಟರ್​ ಜನರಲ್ ಕೋರಿದಾಗ, ಸುಪ್ರೀಂ ಅನುಮತಿ ನೀಡಿತು. ಇದೇ ವೇಳೆ ಪ್ರಕರಣದ ಆರೋಪಿ ಸಂತ್ರಸ್ತೆಯ ಚಿಕ್ಕಪ್ಪನನ್ನು ದೆಹಲಿಯ ತಿಹಾರ್​ ಜೈಲಿಗೆ ಶಿಫ್ಟ್​​ ಮಾಡುವಂತೆ ಸುಪ್ರೀಂ ಆದೇಶಿಸಿದೆ.

ಇನ್ನು ನಿನ್ನೆ ಸುಪ್ರೀಂ ಆದೇಶದಂತೆ ಸಂತ್ರಸ್ತೆಗೆ 25 ಲಕ್ಷ ಮಧ್ಯಂತರ ಪರಿಹಾರ ನೀಡಿರುವುದಾಗಿ ಉತ್ತರಪ್ರದೇಶ ಸರ್ಕಾರ ಮಾಹಿತಿ ನೀಡಿತು. ಸಂತ್ರಸ್ತೆ, ಲಾಯರ್​ ಹಾಗೂ ಅವರ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಿರುವುದಾಗಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

Intro:Body:

Supreme Court

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.