ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯ ಗಳಿಸಿರುವ ನರೇಂದ್ರ ಮೋದಿ ಸರ್ಕಾರ ರಚನೆ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಇದು ಸೂರ್ಯೋಸ್ತದಂತೆ, ಮುಂಜಾವಿಗಾಗಿ ನಿರೀಕ್ಷಿಸಲಾಗ್ತಿದೆ ಎಂದು ಬಣ್ಣಿಸಿದ್ದಾರೆ.
ರಾಷ್ಟ್ರಪತಿ ರಾಮನಾಯ್ ಕೋವಿಂದ್ ಅವರು ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವ ಸಂಪುಟದ ರಾಜೀನಾಮೆಯನ್ನು ಅಂಗೀಕರಿಸಿದ ಬಳಿಕ ಟ್ವೀಟ್ ಮಾಡಿದ್ದಾರೆ.
-
The sun sets on this term but the brightness our work has brought will continue to illuminate the lives of millions.
— Narendra Modi (@narendramodi) May 24, 2019 " class="align-text-top noRightClick twitterSection" data="
A new dawn awaits, a new term beckons.
We are even more determined to fulfil the dreams of 130 crore Indians and create the New India all of us dreamt of. https://t.co/tKrWSwlT9d
">The sun sets on this term but the brightness our work has brought will continue to illuminate the lives of millions.
— Narendra Modi (@narendramodi) May 24, 2019
A new dawn awaits, a new term beckons.
We are even more determined to fulfil the dreams of 130 crore Indians and create the New India all of us dreamt of. https://t.co/tKrWSwlT9dThe sun sets on this term but the brightness our work has brought will continue to illuminate the lives of millions.
— Narendra Modi (@narendramodi) May 24, 2019
A new dawn awaits, a new term beckons.
We are even more determined to fulfil the dreams of 130 crore Indians and create the New India all of us dreamt of. https://t.co/tKrWSwlT9d
'ಸೂರ್ಯಾಸ್ತವಾಗ್ತಿದೆ. ಆದರೆ ಕೋಟ್ಯಾಂತರ ಜನರ ಬದುಕು ಬೆಳಗುವ ನಮ್ಮ ಎಂದಿನ ಕೆಲಸಗಳು ಮುಂದುವರೆಯಲಿವೆ. ಹೊಸ ಮುಂಜಾವಿಗಾಗಿ ಎಲ್ಲರೂ ನಿರೀಕ್ಷಿಸುತ್ತಿದ್ದಾರೆ. 130 ಕೋಟಿ ಭಾರತೀಯರ ಕನಸುಗಳನ್ನು ನನಸು ಮಾಡಲು ನಾವು ಮತ್ತಷ್ಟು ಬದ್ಧರಾಗಿದ್ದೇವೆ. ನಮ್ಮೆಲ್ಲರ ಕನಸಿನಂತೆ ನವಭಾರತ ನಿರ್ಮಾಣವನ್ನೂ ಮಾಡುತ್ತೇವೆ' ಎಂದು ಟ್ವೀಟ್ ಮಾಡಿದ್ದಾರೆ.
ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಚಂಡ ಬಹುಮತ ಸಾಧಿಸಿರುವ ಎನ್ಡಿಎ ಕೂಟ ಮತ್ತೆ ಗದ್ದುಗೆ ಏರಲಿದೆ. ಮುಂದಿನ ವಾರ ಮೋದಿ ಮತ್ತೊಂದು ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಈ ಹಿಂದಿನ ಸಚಿವರನ್ನೇ ಆಯಾ ಖಾತೆಯಲ್ಲಿ ಮುಂದುವರೆಸುವುದೇ ಅಥವಾ ನೂತನ ಸಚಿವರನ್ನು ಆಯ್ಕೆ ಮಾಡುವುದೇ ಎಂಬ ಕಾರ್ಯದಲ್ಲಿ ಬಿಜೆಪಿ ಮುಳುಗಿದೆ. ಯಾರೆಲ್ಲಾ ಸಚಿವರಾಗ್ತಾರೆ ಎಂಬ ಕುತೂಹಲ ಸಹ ಎಲ್ಲರಲ್ಲಿ ಮನೆ ಮಾಡಿದೆ.