ETV Bharat / bharat

10 ಎಕರೆಯಲ್ಲಿ ಮಂದಿರ, 161 ಅಡಿ ಎತ್ತರ: ಮೂರೂವರೆ ವರ್ಷದಲ್ಲಿ ತಲೆ ಎತ್ತಲಿದೆ ಭವ್ಯ 'ರಾಮ ಮಂದಿರ' - ಭೂಮಿ ಪೂಜೆ

10 ಎಕರೆ ಜಾಗದಲ್ಲಿ ರಾಮ ಮಂದಿರವನ್ನು ನಿರ್ಮಿಸಲಾಗುತ್ತದೆ. ಉಳಿದ 57 ಎಕರೆಯಲ್ಲಿ ರಾಮ ಮಂದಿರ ಸಂಕೀರ್ಣವನ್ನು ಅಭಿವೃದ್ಧಿಪಡಿಸಲಾಗುತ್ತದೆ. ದೇವಾಲಯವು ಮೂರು ಮಹಡಿಗಳನ್ನು ಹೊಂದಿದ್ದು, ಪ್ರತಿ ಮಹಡಿಯಲ್ಲಿ 106 ಸ್ತಂಭಗಳು ಇರಲಿವೆ. ಒಟ್ಟು ಮೂರು ಮಹಡಿಗಳಲ್ಲಿ 318 ಸ್ತಂಭಗಳಿರಲಿವೆ. ಮುಂದಿನ ಮೂರುವರೆ ವರ್ಷಗಳಲ್ಲಿ ದೇಗುಲ ನಿರ್ಮಾಣ ಕಾರ್ಯ ಮುಗಿಯುವ ನಿರೀಕ್ಷೆಯಿಯಿದೆ.

ram temple
ರಾಮಮಂದಿರ
author img

By

Published : Aug 3, 2020, 4:52 PM IST

ಅಯೋಧ್ಯೆ(ಉತ್ತರ ಪ್ರದೇಶ): ಪವಿತ್ರ ಕ್ಷೇತ್ರ ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣದ ಆಸೆ ಚಿಗುರಿ ಸದ್ಯ ಕಾರ್ಯ ರೂಪಕ್ಕೆ ಬಂದಿದೆ. ಇನ್ನೆರಡು ದಿನದಲ್ಲೇ ಅಂದ್ರೆ, ಆಗಸ್ಟ್ 5 ರಂದು ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಲು ಸಿದ್ಧತೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ, ದೇವಾಲಯ ನಿರ್ಮಾಣಕ್ಕೆ 'ಭೂಮಿ ಪೂಜೆ' ನೆರವೇರಿಸಲಿದ್ದಾರೆ.

ಬಹು ನಿರೀಕ್ಷಿತ ಭೂಮಿ ಪೂಜೆಯು ಆ.5ರ ಬೆಳಗ್ಗೆ 11 ರಿಂದ ಮಧ್ಯಾಹ್ನ 1.30 ರ ನಡುವೆ ಬರುವ ಅಭಿಜಾತ ಮುಹೂರ್ತದಲ್ಲಿ ನಡೆಯುವ ನಿರೀಕ್ಷೆಯಿದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸಮಯವು ಬಹಳ ಶುಭಕಾರಿಯಾಗಿರಲಿದೆ.

ಭೂಮಿ ಪೂಜೆಯೊಂದಿಗೆ ರಾಮ ಮಂದಿರದ ನಿರ್ಮಾಣ ಕಾರ್ಯ ಪ್ರಾರಂಭವಾದ ನಂತರ, ಈ ಸಾಂಪ್ರದಾಯಿಕ ರಚನೆಯು 3.5 ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಹೀಗಾಗಿ ಜಗತ್ತಿನ ಗಮನ ಸೆಳೆದಿರುವ ಈ ಐತಿಹಾಸಿಕ ರಾಮ ಮಂದಿರ ನಿರ್ಮಾಣವಾದ ಬಳಿಕ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯಗಳಲ್ಲಿ ಒಂದಾಗಲಿದೆ.

ಭೂಮಿ ಪೂಜೆ ಎಂದರೇನು?

ಭೂಮಿ ಪೂಜೆ ಒಂದು ಸಾಂಪ್ರದಾಯಿಕ ಆಚರಣೆಯಾಗಿದ್ದು, ಇದನ್ನು ಕೃಷಿ ಉದ್ದೇಶಗಳ ನಿರ್ಮಾಣ ಅಥವಾ ಭೂ ಚಟುವಟಿಕೆಗಳನ್ನು ಪ್ರಾರಂಭಿಸುವ ಮೊದಲು ನಡೆಸಲಾಗುತ್ತದೆ. ಭೂಮಿ ತಾಯಿ ಮತ್ತು ಪ್ರಕೃತಿಯನ್ನು ಹಿಂದೂ ಧರ್ಮದಲ್ಲಿ ಬಹಳ ಶುಭವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಭೂಮಿ ತಾಯಿಯ ಆಶೀರ್ವಾದ ಪಡೆಯಲು ಸ್ಮಾರಕ, ವಸತಿ, ವಾಣಿಜ್ಯ ಹಾಗೂ ಕೈಗಾರಿಕಾ ಯೋಜನೆ ಪ್ರಾರಂಭವಾಗುವ ಮೊದಲು ಭೂಮಿಯನ್ನು ಪೂಜಿಸಲಾಗುತ್ತದೆ.

ಹೀಗಿರಲಿದೆ ದೇವಾಲಯದ ರಚನೆ...

ಪ್ರಸ್ತುತ ರಾಮ ಮಂದಿರದ ಅಡಿಪಾಯ 15 ಅಡಿ ಆಳದಲ್ಲಿರುತ್ತದೆ. ಇದು 8 ಪದರಗಳನ್ನು ಹೊಂದಿದ್ದು, ಪ್ರತಿ ಪದರವು 2 ಅಡಿ ಅಗಲವಾಗಿರುತ್ತದೆ.

ರಾಮ ಮಂದಿರದ ಉದ್ದೇಶಿತ ಎತ್ತರವನ್ನು 161 ಅಡಿಗಳಿಗೆ ಹೆಚ್ಚಿಸಲಾಗಿದೆ. ಈ ಹಿಂದೆ ಇದನ್ನು 141 ಅಡಿ ಎಂದು ನಿರ್ಧರಿಸಲಾಗಿತ್ತು. ರಾಮ ಮಂದಿರ 5 ಗುಮ್ಮಟಗಳನ್ನು ಹೊಂದಿರುತ್ತದೆ. ಮಂದಿರ ರಚನೆಯ ಉದ್ದೇಶಿತ ಅಗಲ 140 ಅಡಿಗಳು.

ಬರೋಬ್ಬರಿ 69 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಹಾಗೂ ಐದು ಗುಮ್ಮಟಗಳನ್ನು ಹೊಂದಿರುವ ವಿಶ್ವದ ಏಕೈಕ ದೇವಾಲಯ ಇದಾಗಲಿದೆ.

ಹೀಗಿರಲಿದೆ ರಾಮಮಂದಿರ

ದೇವಾಲಯವು ಮೂರು ಮಹಡಿಗಳನ್ನು ಹೊಂದಿದ್ದು, ಪ್ರತಿ ಮಹಡಿಯಲ್ಲಿ 106 ಸ್ತಂಭಗಳು ಇರಲಿವೆ. ಒಟ್ಟು ಮೂರು ಮಹಡಿಗಳಲ್ಲಿ 318 ಸ್ತಂಭಗಳಿರಲಿವೆ.

ಈ ಎಲ್ಲಾ ಸ್ತಂಭಗಳನ್ನು ಹಿಂದೂ ಪುರಾಣಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗುತ್ತದೆ. ಇದೇ ವಿಚಾರವಾಗಿ ಹಲವು ಸಂತರೊಂದಿಗೆ ಸಮಾಲೋಚನೆ ನಡೆಸಿ, ಅವರ ಸಲಹೆಯಂತೆ ಹನುಮಂತ ಮತ್ತು ಕೃಷ್ಣನ ವಿಗ್ರಹಗಳನ್ನು ಸ್ಥಾಪಿಸಲಾಗುತ್ತದೆ.

ಆರಂಭದಲ್ಲಿ ಈ ದೇವಾಲಯವನ್ನು ಎರಡು ಮಹಡಿಗಳಲ್ಲಿ ನಿರ್ಮಿಸಲು ಉದ್ದೇಶಿಸಗಿತ್ತು. ಆದರೆ ದೇವಾಲಯದ ಭವ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ಇದನ್ನು ಮೂರಕ್ಕೆ ಹೆಚ್ಚಿಸಲಾಗಿದೆ.

ಈ ದೇವಾಲಯದಲ್ಲಿ ಅನೇಕ ಪ್ರದೇಶಗಳನ್ನು ನಿರ್ಮಿಸಲಾಗುತ್ತದೆ. ಅಲ್ಲಿ ಭಕ್ತರು ಕುಳಿತು ಪ್ರಾರ್ಥನೆ ಸಲ್ಲಿಸಲು ಅವಕಾಶ ಸಿಗಲಿದೆ. ಭಕ್ತರ ಪ್ರದಕ್ಷಿಣೆಗಾಗಿ ಕೆಲ ರಚನೆಯನ್ನು ವಿನ್ಯಾಸಗೊಳಿಸಲಾಗಿದೆ.

ಈ ದೇವಾಲಯವು ಐದು ಪ್ರವೇಶದ್ವಾರಗಳನ್ನು ಹೊಂದಿರಲಿದೆ. ಸಿಂಹ ದ್ವಾರ, ನೃತ್ಯ ಮಂಟಪ, ರಾಂದ್​ ಮಂಟಪ, ಪೂಜಾ ಕೊಠಡಿ ಹಾಗೂ ಭಕ್ತರ ಪ್ರದಕ್ಷಿಣೆಗೆ ಸ್ಥಳದೊಂದಿಗೆ ಶ್ರೀರಾಮನ ಗರ್ಭಗುಡಿ ಇರಲಿದೆ. ಶ್ರೀರಾಮನ ವಿಗ್ರಹವನ್ನು ನೆಲಮಹಡಿಯ ಗರ್ಭಗುಡಿಯಲ್ಲೇ ಪ್ರತಿಷ್ಠಾಪನೆ ಮಾಡಲಾಗುತ್ತದೆ.

ರಾಮ ದೇಗುಲ ನಿರ್ಮಾಣ ಸ್ಥಳದಲ್ಲಿ ಸುಮಾರು 2,000 ಅಡಿಗಳಷ್ಟು ಆಳದ ಭೂಗರ್ಭದಲ್ಲಿ ಟೈಮ್ ಕ್ಯಾಪ್ಸುಲ್ ಇಡಲಾಗುತ್ತದೆ. ಈ ಕ್ಯಾಪ್ಸುಲ್ ಭವಿಷ್ಯದಲ್ಲಿ ದೇವಾಲಯದ ಇತಿಹಾಸವನ್ನು ಅಧ್ಯಯನ ಮಾಡಲು ಬಯಸುವವರಿಗೆ ಸಹಾಯ ಮಾಡುತ್ತದೆ.

ದೇವಾಲಯ ನಿರ್ಮಾಣಕ್ಕೆ ಇಟ್ಟಿಗೆ, ಮರಳು ಮತ್ತು ಮಣ್ಣು...

ಗಯಾ ಧಾಮ್‌ನಿಂದ 40 ಕೆಜಿ ಬೆಳ್ಳಿ ಇಟ್ಟಿಗೆ ಮತ್ತು ಫಾಲ್ಗು ನದಿಯ ಮರಳನ್ನು ದೇವಾಲಯದ ಅಡಿಪಾಯ ಹಾಕಲು ಬಳಸಲಾಗುತ್ತದೆ.

ಭೂಮಿ ಪೂಜೆ ಸಮಾರಂಭದಲ್ಲಿ ಗರ್ಭಗೃಹದೊಳಗೆ ಐದು ಬೆಳ್ಳಿ ಇಟ್ಟಿಗೆಗಳನ್ನು ಇಡಲಾಗುತ್ತದೆ. ಈ ಐದು ಇಟ್ಟಿಗೆಗಳು ಹಿಂದೂ ಪುರಾಣದ ಪ್ರಕಾರ ಐದು ಗ್ರಹಗಳನ್ನು ಸಂಕೇತಿಸುತ್ತವೆ ಎಂದು ನಂಬಲಾಗಿದೆ.

ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮ ಕ್ಷೇತ್ರದಿಂದ ಅಯೋಧ್ಯೆ ಭೂಮಿ ಪೂಜೆಗೆ ನೀರು ಮತ್ತು ಮಣ್ಣನ್ನು ಬಳಸಲಾಗುತ್ತಿದೆ. ಈ ಮೂಲಕ ಮೂರೂ ನದಿಗಳನ್ನು ಅಯೋಧ್ಯೆಗೆ ಕರೆದೊಯ್ಯಲಾಗುತ್ತದೆ. ರಾಷ್ಟ್ರ ರಾಜಧಾನಿ ದೆಹಲಿಯ ದೇವಾಲಯಗಳು ಮತ್ತು ಗುರುದ್ವಾರಗಳು ಸೇರಿದಂತೆ 11 ಪವಿತ್ರ ಸ್ಥಳಗಳಿಂದ ಮಣ್ಣು ಮತ್ತು ಮರಳನ್ನು ದೇಗುಲ ನಿರ್ಮಾಣಕ್ಕೆ ಬಳಸಲಾಗುತ್ತದೆ.

ರಾಮ ಮಂದಿರ ಸಂಕೀರ್ಣ...

ವಿಶೇಷವೆಂದರೆ ಈ ರಾಮ ಮಂದಿರವನ್ನು 10 ಎಕರೆ ಜಾಗದಲ್ಲಿ ನಿರ್ಮಿಸಲಾಗುತ್ತದೆ. ಉಳಿದ 57 ಎಕರೆಯಲ್ಲಿ ರಾಮ ಮಂದಿರ ಸಂಕೀರ್ಣವನ್ನು ಅಭಿವೃದ್ಧಿಪಡಿಸಲಾಗುತ್ತದೆ.

ದೇವಾಲಯ ಸಂಕೀರ್ಣದಲ್ಲಿ 27 ನಕ್ಷತ್ರ ಮರಗಳನ್ನು ನೆಡಲಾಗುತ್ತದೆ. ಇದರ ಉದ್ದೇಶವೆಂದರೆ ಭಕ್ತರು ತಮ್ಮ ಜನ್ಮದಿನಗಳನ್ನು ತಮ್ಮ ನಕ್ಷತ್ರಪುಂಜಕ್ಕೆ ಅನುಗುಣವಾಗಿ ಮರದ ಕೆಳಗೆ ಕುಳಿತು ದೇವಾಲಯದ ಸಂಕೀರ್ಣದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಬಹುದಾಗಿದೆ.

ಇದಲ್ಲದೆ, ರಾಮ ಮಂದಿರದ ಅಡಿಪಾಯ ನಿರ್ಮಿಸಲು ಕಾಂಕ್ರಿಟ್ ಮತ್ತು ಮೊರಾಂಗ್ (ಒಂದು ಬಗೆಯ ನಿರ್ಮಾಣ ಸಾಮಗ್ರಿ) ಅನ್ನು ಬಳಸಲಾಗುತ್ತದೆ.

ವಿಶೇಷವೆಂದರೆ ದೇವಾಲಯದ ನಿರ್ಮಾಣದಲ್ಲಿ ಕಬ್ಬಿಣವನ್ನು ಬಳಸುತ್ತಿಲ್ಲ. ಇನ್ನೊಂದೆಡೆ ವಾಲ್ಮಿಕಿ ರಾಮಾಯಣದಲ್ಲಿ ಉಲ್ಲೇಖಿಸಲಾದ ಮರಗಳನ್ನು ರಾಮ ದೇವಾಲಯದ ಸಂಕೀರ್ಣದಲ್ಲಿ ನೆಡಲಾಗುತ್ತದೆ. ಅಲ್ಲದೆ ಇಡೀ ಪ್ರದೇಶಕ್ಕೆ ವಾಲ್ಮಿಕಿ ರಾಮಾಯಣದಲ್ಲಿರುವ ಹೆಸರನ್ನೇ ಇಡಲಾಗುತ್ತದೆ.

ರಾಮ ದೇವಾಲಯದ ಆವರಣದೊಳಗೆ 'ರಾಮ್‌ಕಥಾ ಕುಂಜ್ ಪಾರ್ಕ್' ಸಹ ನಿರ್ಮಿಸಲಾಗುತ್ತದೆ. ಇದು ಶ್ರೀರಾಮನ ಜೀವನ ಮತ್ತು ವಿವಿಧ ಅಂಶಗಳನ್ನು ಆಧರಿಸಿ ನಿರ್ಮಾಣ ಮಾಡಲಾಗುತ್ತದೆ.

ಉತ್ಖನನ ಮಾಡುವಾಗ ದೊರೆತ ಅವಶೇಷಗಳ ವಸ್ತುಸಂಗ್ರಹಾಲಯವನ್ನು ಈ ರಾಮ ಮಂದಿರ ಸಂಕೀರ್ಣದಲ್ಲಿ ನಿರ್ಮಿಸಲಾಗುತ್ತದೆ. ಗೋಶಾಲೆ, ಧರ್ಮಶಾಲೆ ಮತ್ತು ಇತರ ಕೆಲವು ದೇವಾಲಯಗಳಂತಹ ಇತರ ರಚನೆಗಳನ್ನು ಸಹ ರಾಮ ಮಂದಿರ ಸಂಕೀರ್ಣದಲ್ಲಿ ನಿರ್ಮಿಸಲಾಗುತ್ತದೆ.

ರಾಮ ಮಂದಿರದ ಭೂಮಿ ಪೂಜೆಗೆ ತಾಮ್ರ ಫಲಕವನ್ನು ಸಿದ್ಧಪಡಿಸಲಾಗಿದ್ದು, ಅದರಲ್ಲಿ ರಾಮ ದೇವಸ್ಥಾನಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಸಂಸ್ಕೃತ ಭಾಷೆಯಲ್ಲಿ ಕೆತ್ತಲಾಗಿದೆ. ಮಂದಿರದ ಹೆಸರು, ಸ್ಥಳ, ನಕ್ಷತ್ರಪುಂಜ, ಸಮಯವನ್ನು ತಾಮ್ರದ ತಟ್ಟೆಯಲ್ಲಿ ಬರೆದು, ಅದನ್ನು ದೇವಾಲಯದ ಅಡಿಪಾಯದಲ್ಲಿ ಇಡಲಾಗುತ್ತದೆ.

ದೇವಾಲಯದ ವಾಸ್ತುಶಿಲ್ಪಿಗಳು...

ಭವ್ಯ ರಾಮ ಮಂದಿರ ನಿರ್ಮಾಣ ಯೋಜನೆಯ ಮುಖ್ಯ ವಾಸ್ತುಶಿಲ್ಪಿ ಚಂದ್ರಕಾಂತ್ ಸೋಮಪುರ ಅವರ ಪುತ್ರರಾದ ವಾಸ್ತುಶಿಲ್ಪಿಗಳಾದ ನಿಖಿಲ್ ಸೋಮಪುರ ಮತ್ತು ಆಶಿಶ್ ಸೋಮಪುರ, ದೇವಾಲಯ ನಿರ್ಮಾಣದ ಮರುವಿನ್ಯಾಸವನ್ನು ಸಿದ್ಧಪಡಿಸಿದ್ದಾರೆ.

ದೇವಾಲಯದ ನಿರ್ಮಾಣದ ಅಂದಾಜು ವೆಚ್ಚ 300 ಕೋಟಿ ರೂ. ಆದರೆ ದೇವಾಲಯದ ಆವರಣದ ಸುತ್ತ 20 ಎಕರೆ ಭೂಮಿಯನ್ನು ಅಭಿವೃದ್ಧಿಪಡಿಸಲು 1,000 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.