ನ್ಯೂಯಾರ್ಕ್: ಕೊರೊನಾ ವೇಳೆಯಲ್ಲಿ ಬಹುತೇಕ ರಾಷ್ಟ್ರಗಳು ಅನುಸರಿಸುತ್ತಿರುವ ಕಠಿಣವಾದ ಐಸೋಲೇಷನ್ ಕ್ರಮಗಳು ಮರಣ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ. ಸಂಶೋಧನೆ ಪ್ರಕಾರ ಬೃಹತ್ ಸಮಾರಂಭಗಳನ್ನು ರದ್ದು ಮಾಡುವುದು, ರೆಸ್ಟೋರೆಂಟ್ ಹಾಗೂ ಅನಿವಾರ್ಯವಲ್ಲದ ಉದ್ಯಮಗಳನ್ನು ಮುಚ್ಚುವುದು ಮುಂತಾದ ಕ್ರಮಗಳಿಂದ ಕೊರೊನಾ ಹರಡದಂತೆ ತಡೆಯಬಹುದು ಎಂದು ಸಂಶೋಧನೆ ಬಹಿರಂಗಪಡಿಸಿದೆ.
ಅಮೆರಿಕನ್ ಸೊಸೈಟಿ ಆಫ್ ಸೈಟೋಪೆಥಾಲಜಿಯ ಸಂಶೋಧನಾ ವರದಿಯಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ. ಇಲ್ಲಿನ ಸಂಶೋಧಕರು 1918-19ರಲ್ಲಿ ಜಗತ್ತಿನಲ್ಲಿ ಹರಡಿದ್ದ ಸ್ಪ್ಯಾನಿಷ್ ಫ್ಲೂ ವೇಳೆಯ ವರದಿಗಳನ್ನು ಪರಿಶೀಲಿಸಿ ಸಂಶೋಧನೆ ನಡೆಸಿದ್ದಾರೆ. ಈ ಫ್ಲೂ ಜಗತ್ತಿನ ಐದನೇ ಒಂದು ಭಾಗದಷ್ಟು ಜನರಿಗೆ ಹರಡಿತ್ತು ಹಾಗೂ 50 ಮಿಲಿಯನ್ ಮಂದಿಯನ್ನು ಬಲಿ ಪಡೆದಿತ್ತು.
ಅದರ ಅಂಕಿ ಅಂಶಗಳ ಪ್ರಕಾರ ನಗರಗಳಲ್ಲಿ ಶಾಲೆ, ಚರ್ಚ್ಗಳನ್ನು ಮುಚ್ಚುವುದು, ಜನರು ಗುಂಪು ಸೇರುವುದನ್ನು ತಪ್ಪಿಸುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಮಾಡುವುದು, ಸೋಂಕುನಿವಾರಕಗಳ ಬಳಗೆ ರೋಗ ಹರಡುವಿಕೆ ಹಾಗೂ ಮರಣಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂದು ಗೊತ್ತಾಗಿದೆ. ಫ್ಲೂನ ವೇಳೆಯಲ್ಲಿನ ಈ ಎಲ್ಲಾ ಅಂಶಗಳ ಅಧ್ಯಯನದಿಂದ ಗೊತ್ತಾಗಿವೆ.