ETV Bharat / bharat

ಹೆತ್ತಮ್ಮನಿಗೆ ಬೇಡವಾದ ಕಂದಮ್ಮ... ಮಗು ಹೊತ್ತೊಯ್ದ ಬೀದಿ ನಾಯಿ!! - ಮಗು ಹೊತ್ತೊಯ್ದ ಬೀದಿ ನಾಯಿ

ಮಗುವನ್ನು ಯಾರೋ ರಸ್ತೆ ಬದಿ ಬಿಸಾಕಿ ಹೋಗಿರಬಹುದು. ಇಲ್ಲಿ ಪಕ್ಕದಲ್ಲಿ ಆಸ್ಪತ್ರೆಯೊಂದು ಇರುವ ಕಾರಣ ಯಾರೋ ಈ ಕೃತ್ಯ ಮಾಡಿದ್ದಾರೆ ಎಂದು ದಾರಿಹೋಕರು ತಿಳಿಸಿದ್ದಾರೆ.

Stray dog
ನಾಯಿ
author img

By

Published : Aug 22, 2020, 12:12 PM IST

ಹೈದರಾಬಾದ್​(ತೆಲಂಗಾಣ): ನವಜಾತ ಹೆಣ್ಣು ಮಗುವನ್ನು ನಾಯಿಯೊಂದು ಹೊತ್ತು ಒಯ್ಯುತ್ತಿದ್ದ ಘಟನೆ ನಗರದ ಎಲ್​.ಬಿ ನಗರದಲ್ಲಿ ನಡೆದಿದೆ.

ಬೀದಿ ನಾಯಿ ಹೊತ್ತೊಯ್ದ ಮಗುವಿನ ಶವ

ಎಲ್‌ಬಿ ನಗರ ಪ್ರದೇಶದಲ್ಲಿ ನವಜಾತ ಹೆಣ್ಣು ಶಿಶುವನ್ನು ಬೀದಿ ನಾಯಿಯೊಂದು ಎಳೆದೊಯ್ಯುತ್ತಿತ್ತು. ಅದೇ ದಾರಿಯಲ್ಲಿ ಬಂದ ದ್ವಿಚಕ್ರ ವಾಹನ ಸವಾರರು ಈ ದೃಶ್ಯವನ್ನು ಕಂಡಿದ್ದಾರೆ. ಗಾಬರೊಗೊಂಡ ಅವರು ಗಟ್ಟಿಯಾಗಿ ಕೂಗಿಕೊಂಡಿದ್ದಾರೆ. ಬೆದರಿದ ನಾಯಿ ಆ ಮಗುವಿನ ದೇಹವನ್ನು ಅಲ್ಲೇ ಬಿಟ್ಟು ಓಡಿ ಹೋಗಿದೆ.

ಮಗುವನ್ನು ಯಾರೋ ರಸ್ತೆ ಬದಿ ಬಿಸಾಕಿ ಹೋಗಿರಬಹುದು. ಇಲ್ಲಿ ಪಕ್ಕದಲ್ಲಿ ಆಸ್ಪತ್ರೆಯೊಂದು ಇರುವ ಕಾರಣ ಯಾರೋ ಈ ಕೃತ್ಯ ಮಾಡಿದ್ದಾರೆ ಎಂದು ದಾರಿಹೋಕರು ತಿಳಿಸಿದ್ದಾರೆ.

ಇನ್ನು ಬೈಕ್​ ಸವಾರರು ಕೂಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಬಳಿಕ ಮಗುವಿನ ಶವವನ್ನು ಒಸ್ಮಾನಿಯಾ ಜನರಲ್ ಆಸ್ಪತ್ರೆಗೆ ಸಾಗಿಸಿದರು. ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.