ಮುಂಬೈ: ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಸೋಮವಾರ ಭರ್ಜರಿ ಏರಿಕೆ ದಾಖಲಿಸಿವೆ.
ಸೆನ್ಸೆಕ್ಸ್ 877.95 ಪಾಯಿಂಟ್ ಏರಿಕೆ ಕಂಡು, 33,302.05 ಪಾಯಿಂಟ್ಗಳೊಂದಿಗೆ ದಿನದ ಆರಂಭಿಕ ಏರಿಕೆ ಕಂಡು ಹರ್ಷಕ್ಕೆ ಕಾರಣವಾಗಿದೆ. ಜಾಗತಿಕ ವಿದ್ಯಮಾನ, ಲಾಕ್ಡೌನ್ ಸಡಿಲಿಕೆ ಹೀಗೆ ನಾನಾ ಕಾರಣಗಳಿಂದ ಮುಂಬೈ ಷೇರುಪೇಟೆ ಆರಂಭಿಕ ಏರಿಕೆ ದಾಖಲಿಸಿದೆ.
ಈ ವಿದ್ಯಮಾನ ಹೂಡಿಕೆದಾರರ ಮಂದಹಾಸಕ್ಕೂ ಕಾರಣವಾಗಿದೆ.