ETV Bharat / bharat

ರಾಜ್ಯಗಳಿಗೆ ಬೇಕಿರುವುದು ನಗದು... ಜಿಎಸ್​ಟಿ ಪರಿಹಾರ ನೀಡುವಂತೆ ಚಿದಂಬರಂ ಆಗ್ರಹ - ಕೇಂದ್ರದ ವಿರುದ್ಧ ಚಿದಂಬರಂ ವಾಗ್ದಾಳಿ

ರಾಜ್ಯಗಳಿಗೆ 'ಕಂಫರ್ಟ್ ಲೆಟರ್' ನೀಡುವ ಕೇಂದ್ರ ಸರ್ಕಾರದ ಪ್ರಸ್ತಾವನೆ ಬಗ್ಗೆ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಆಕ್ರೋಶ ವ್ಯಕ್ತಪಡಿಸಿದ್ದು, ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Chidambaram to Centre
ಜಿಎಸ್​ಟಿ ಪರಿಹಾರ ನೀಡುವಂತೆ ಚಿದಂಬರಂ ಆಗ್ರಹ
author img

By

Published : Sep 10, 2020, 1:53 PM IST

ನವದೆಹಲಿ: ಜಿಎಸ್‌ಟಿ ಪರಿಹಾರದ ಅಂತರ ನಿವಾರಿಸಲು ಹಣವನ್ನು ಸಾಲವಾಗಿ ಪಡೆಯಲು ರಾಜ್ಯಗಳಿಗೆ 'ಕಂಫರ್ಟ್ ಲೆಟರ್' ನೀಡುವ ಪ್ರಸ್ತಾಪದ ವಿರುದ್ಧ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಕೇಂದ್ರದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ರಾಜ್ಯಗಳಿಗೆ ಬೇಕಾಗಿರುವುದು ನಗದು. ಸಂಪನ್ಮೂಲಗಳನ್ನು ಸಂಗ್ರಹಿಸಲು ಮತ್ತು ಜಿಎಸ್​ಟಿ ಪರಿಹಾರದ ಕೊರತೆಯನ್ನು ರಾಜ್ಯಗಳಿಗೆ ಪಾವತಿಸಲು ಕೇಂದ್ರ ಸರ್ಕಾರಕ್ಕೆ ಮಾತ್ರ ಬಹು ಆಯ್ಕೆ ಮತ್ತು ನಮ್ಯತೆ ಇದೆ' ಎಂದು ಚಿದಂಬರಂ ಹೇಳಿದ್ದಾರೆ.

ರಾಜ್ಯಗಳನ್ನು ಸಾಲ ಮಾಡಲು ಒತ್ತಾಯಿಸಿದರೆ ಈಗಾಗಲೇ ಕಡಿತವನ್ನು ಅನುಭವಿಸಿರುವ ಬಂಡವಾಳ ವೆಚ್ಚದ ಮೇಲೆ ಪೆಟ್ಟು ಬೀಳುತ್ತದೆ ಎಂದಿದ್ದಾರೆ.

ಪಂಜಾಬ್, ತಮಿಳುನಾಡು ಮತ್ತು ಛತ್ತೀಸ್‌ಘಡ ಸೇರಿದಂತೆ ಹಲವು ರಾಜ್ಯಗಳು ಈಗಾಗಲೇ ಈ ಪ್ರಸ್ತಾಪವನ್ನು ತಿರಸ್ಕರಿಸಿವೆ.

2020-21ನೇ ಸಾಲಿನ ಜಿಎಸ್‌ಟಿ ಪರಿಹಾರದ ಮೊತ್ತವಾಗಿ ಕೇಂದ್ರ ಸರ್ಕಾರವು ತನ್ನ ರಾಜ್ಯಕ್ಕೆ 2,828 ಕೋಟಿ ರೂ.ಗಳನ್ನು ಮಂಜೂರು ಮಾಡಬೇಕೆಂದು ಛತ್ತೀಸ್‌ಘಡ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.