ನವದೆಹಲಿ: ದೇಶದಲ್ಲಿ ವಿಮಾನ ಸೇವೆ ಒದಗಿಸುವ ಸ್ಪೈಸ್ ಜೆಟ್ ಕಂಪನಿ, ವೆಬ್‌ಸೈಟ್ ಮತ್ತು ಮೊಬೈಲ್ ಆ್ಯಪ್ ಜೊತೆಗೆ ವಾಟ್ಸಾಪ್‌ನಲ್ಲಿ ಗ್ರಾಹಕ ಸೇವೆ ಮತ್ತು ಚೆಕ್-ಇನ್ ಸೌಲಭ್ಯವನ್ನು ಲಭ್ಯಗೊಳಿಸಿದೆ.
ಕೊರೊನಾ ವೈರಸ್ ಭೀತಿ ಹಿನ್ನೆಲೆ ಸಾಮಾಜಿಕ ದೂರವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯಾಣಿಕರು ವಿಮಾನ ಹೊರಡುವ ಮೊದಲು 48 ಗಂಟೆಗಳಿಂದ 60 ನಿಮಿಷಕ್ಕೆ ಆನ್‌ಲೈನ್‌ನಲ್ಲಿ ಚೆಕ್-ಇನ್ ಮಾಡುವುದು ಮೇ ತಿಂಗಳಲ್ಲಿ ಸರ್ಕಾರ ಕಡ್ಡಾಯಗೊಳಿಸಿತ್ತು.
ಸ್ಪೈಸ್ ಜೆಟ್‌ನ ಸ್ವಯಂಚಾಲಿತ ಗ್ರಾಹಕ ಸೇವಾ ಏಜೆಂಟ್ ಆದ 'ಮಿ. ಪೆಪ್ಪರ್' (Ms Pepper) ಅನ್ನು ಪ್ರಯಾಣಿಕರು ಮೊಬೈಲ್ ಸಂಖ್ಯೆ 6000000006 ಸಂಖ್ಯೆಗೆ ಕರೆ ಮಾಡುವ ಮೂಲಕ ಸಂಪರ್ಕ ಪಡೆಯಬಹುದಾಗಿದೆ.
ವಿಮಾನ ನಿಲ್ದಾಣಕ್ಕೆ ಹೋಗುವಾಗ ಮಿ. ಪೆಪ್ಪರ್'ಗೆ ವಾಟ್ಸಾಪ್‌ನಲ್ಲಿ ಹಾಯ್ ಎಂದು ಕಳುಹಿಸಿದರೆ ಸಾಕು, ಕಡ್ಡಾಯ ವೆಬ್ ಚೆಕ್-ಇನ್ ಪ್ರಕ್ರಿಯೆಯ ಕುರಿತು ಸಹಕಾರಿ ಮಾರ್ಗದರ್ಶನ ದೊರೆಯಲಿದೆ.
ಹಾಗೂ ಮಿ. ಪೆಪ್ಪರ್ ಗ್ರಾಹಕರ ಪ್ರಶ್ನೆಗಳನ್ನು ಸಹ ಪರಿಹರಿಸಲಿದ್ದು, ಇದು ಸ್ಪೈಸ್ ಜೆಟ್ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್‌ನಲ್ಲಿಯೂ ಲಭ್ಯವಿದೆ.