ಓರ್ವ ಕಲಾವಿದ ಯಾವೆಲ್ಲಾ ಭಾವಗಳಲ್ಲಿ ನಟಿಸಬಲ್ಲನೋ ಅದೆಲ್ಲಾ ಭಾವಗಳಲ್ಲಿ ಎಸ್ಪಿ ಹಾಡಬಲ್ಲವರಾಗಿದ್ದರು. ಸುಮಾರು 16 ಭಾಷೆಗಳಲ್ಲಿ ಹಾಡಿರೋ ಎಸ್ಪಿಬಿಗೆ ಕನ್ನಡ ಅಂದ್ರೆ ಅಚ್ಚುಮೆಚ್ಚು.. ಇವರ ಕನ್ನಡಾಭಿಮಾನದ ಹಾಡುಗಳು ಈಗಲೂ ಎಲ್ಲರ ಕಿವಿಗಳಲ್ಲಿ ಗುನುಗುವ ಮಟ್ಟಕ್ಕೆ ಖ್ಯಾತಿ ಪಡೆದಿವೆ. ಇವರು ಹಾಡಿರೋ ಮೊದಲ ಕನ್ನಡಾಭಿಮಾನದ ಹಾಡು ಇದೇ ನಾಡು, ಇದೇ ಭಾಷೆ ಅನ್ನೋ ತಿರುಗುಬಾಣ ಚಿತ್ರದ ಹಾಡು.. 1983ರಲ್ಲಿ ಬಂದ ಈ ಹಾಡು ಇಂದಿಗೂ ಎವರ್ ಗ್ರೀನ್..
'ಕರುನಾಡ ತಾಯಿ ಸದಾ ಚಿನ್ಮಯಿ' ಅಂದು ಹೃದಯ ಕದ್ದ ಎಸ್ಪಿಬಿ!
ತಿರುಗುಬಾಣದ ನಂತರ ಎಸ್ಪಿಬಿ ಹಾಡಿದ ಕನ್ನಡಾಭಿಮಾನದ ಹಾಡು ಕರುನಾಡ ತಾಯಿ, ಸದಾ ಚಿನ್ಮಯಿ.. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ನಾನು ನನ್ನ ಹೆಂಡ್ತಿ ಚಿತ್ರದಲ್ಲಿ ಬರೋ ಈ ಹಾಡು ಪ್ರತಿಯೊಬ್ಬ ಕನ್ನಡಿಗರೂ ಕುಣಿದು ಕುಪ್ಪಳಿಸುವಂತೆ ಮಾಡಿಬಿಡ್ತು. ಹಂಸಲೇಖ ಗೀತೆ ರಚನೆಯ ಈ ಹಾಡು ಪ್ರತಿ ಕನ್ನಡ ರಾಜ್ಯೋತ್ಸವಗಳಲ್ಲಿ ಖಾಯಂ.
'ಕನ್ನಡ ಮಣ್ಣನು ಮರಿಬೇಡ' ಅನ್ನೋ ಗೀತೆ ರೋಮಾಂಚಕ!
ಅನಂತ ನಾಗ್ ಅವರ ಸಿನಿಮಾದಲ್ಲಿ ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೇ ಹಾಡು ಸಾಹಿತ್ಯ ರತ್ನಗಳನ್ನು ಸ್ಮರಿಸೋದು ಮಾತ್ರವಲ್ಲದೇ ಕನ್ನಡಿಗರ ಮನೆದಲ್ಲಿ ಹೆಮ್ಮೆಯುಕ್ಕಿಸುತ್ತದೆ. ಅಂಬರೀಷ್ ಅವರ ಸೋಲಿಲ್ಲದ ಸರದಾರ ಚಿತ್ರದಲ್ಲಿ ಈ ಕನ್ನಡ ಮಣ್ಣನು ಮರಿಬೇಡ ಹಾಡಂತೂ ಕನ್ನಡಿಗರಲ್ಲಿ ರೋಮಾಂಚನ ಉಂಟು ಮಾಡದಿರೋದಿಲ್ಲ.
ವಿಷ್ಣುವರ್ಧನ್ ಸಿನಿಮಾಗಳಲ್ಲಿ ಎರಡು ಕನ್ನಡಾಭಿಮಾನ ಮೆರೆಯೋ ಗೀತೆಗಳಿಗೆ ಎಸ್ಪಿಬಿ ಧ್ವನಿ ನೀಡಿದ್ದಾರೆ. ಸಿಂಹಾದ್ರಿಯ ಸಿಂಹ ಸಿನಿಮಾದ ಕಲ್ಲಾದರೆ ನಾನು.. ವೀರಪ್ಪನಾಯ್ಕ ಚಿತ್ರದಲ್ಲಿ ಭಾರತಾಂಬೆ ನಿನ್ನ ಜನುಮದಿನ ಹಾಡು.. ಇಂದಿಗೂ ಕೂಡಾ ಹಚ್ಚಹಸಿರಾಗುಳಿದಿವೆ.
ದೇಶಾಭಿಮಾನ ಹೆಚ್ಚಿಸಿದ ಎಕೆ-47 ಚಿತ್ರ ಓ ಮೈ ಸನ್ ಹಾಡು...
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರ ಎಕೆ-47 ಚಿತ್ರದಲ್ಲಿನ ಓ ಮೈ ಸನ್ ಹಾಡು ಕೇಳಿದ್ರೆ ಮೈ ಜುಮ್ಮೆನ್ನುತ್ತೆ.. ಈ ಹಾಡನ್ನು ಕೇಳ್ತಿದ್ರೆ ದೇಶಭಕ್ತಿ ಉಕ್ಕಿ ಹರಿಯುತ್ತದೆ. ದೇಶಾಭಿಮಾನ ಹಾಗೂ ಕನ್ನಡಾಭಿಮಾನ ಇರೋ ಹಾಡುಗಳು ಮಾತ್ರ ಅಲ್ಲ. ಎಸ್ಪಿಬಿ ಹಾಡಿರುವ ಎಲ್ಲಾ ಹಾಡುಗಳೂ ಕೂಡಾ ಕನ್ನಡಿಗರಿಗೆ ಫೇವರಿಟ್.