ETV Bharat / bharat

ವ್ಯಾಪಾರ ಅಭಿವೃದ್ಧಿ ಘಟಕವನ್ನು ಆರಂಭಿಸಿದ ದಕ್ಷಿಣ ರೈಲ್ವೆ..

author img

By

Published : Jul 5, 2020, 7:09 PM IST

ಬಿಡಿಯು ಮುಖ್ಯ ಸರಕು ಸಾಗಾಣಿಕೆ ವ್ಯವಸ್ಥಾಪಕ ಮತ್ತು ಮೂವರು ಸದಸ್ಯರನ್ನು ಒಳಗೊಂಡಿರುತ್ತದೆ. ಅವರು ಉದ್ಯಮದೊಂದಿಗೆ ಸಂವಹನ ನಡೆಸುವ ಮೂಲಕ ಹೊಸ ಸಂಚಾರವನ್ನು ಆಕರ್ಷಿಸುವ ಕ್ರಮಗಳನ್ನು ಪ್ರಾರಂಭಿಸುತ್ತಾರೆ..

ವ್ಯಾಪಾರ ಅಭಿವೃದ್ಧಿ ಘಟಕ
ವ್ಯಾಪಾರ ಅಭಿವೃದ್ಧಿ ಘಟಕ

ಚೆನ್ನೈ: ಸರಕು ಸಾಗಣೆ ಹೆಚ್ಚಳ ಹಾಗೂ ವ್ಯಾಪಾರ ಮತ್ತು ಉದ್ಯಮದೊಂದಿಗಿನ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ದಕ್ಷಿಣ ರೈಲ್ವೆ ವ್ಯಾಪಾರ ಅಭಿವೃದ್ಧಿ ಘಟಕವನ್ನು (ಬಿಡಿಯು) ಸ್ಥಾಪಿಸಿದೆ.

ರೈಲ್ವೆ ಮಂಡಳಿಯ ನಿರ್ದೇಶನದಂತೆ ದಕ್ಷಿಣ ರೈಲ್ವೆ ಭಾನುವಾರ ರೈಲ್ವೆಯ ವಲಯ ಮತ್ತು ವಿಭಾಗೀಯ ಮಟ್ಟದಲ್ಲಿ ಬಿಡಿಯುಗಳನ್ನು ಸ್ಥಾಪಿಸಿದೆ. ಈ ಮೂಲಕ ಉದ್ಯಮ ಮತ್ತು ವ್ಯಾಪಾರದತ್ತ ಗಮನಹರಿಸಿದೆ. ಸರಕುಗಳ ಸಾಗಣಿಕೆಯಲ್ಲಿ ರೈಲ್ವೆಯ ಪಾಲನ್ನು ಹೆಚ್ಚಿಸಲು ಈ ಕ್ರಮವು ಹೆಚ್ಚು ಉಪಕಾರಿಯಾಗಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಬಿಡಿಯು ಮುಖ್ಯ ಸರಕು ಸಾಗಾಣಿಕೆ ವ್ಯವಸ್ಥಾಪಕ ಮತ್ತು ಮೂವರು ಸದಸ್ಯರನ್ನು ಒಳಗೊಂಡಿರುತ್ತದೆ. ಅವರು ಉದ್ಯಮದೊಂದಿಗೆ ಸಂವಹನ ನಡೆಸುವ ಮೂಲಕ ಹೊಸ ಸಂಚಾರವನ್ನು ಆಕರ್ಷಿಸುವ ಕ್ರಮಗಳನ್ನು ಪ್ರಾರಂಭಿಸುತ್ತಾರೆ. ಹೆಚ್ಚುವರಿ ಸರಕು ಸಾಗಣೆಯನ್ನು ಆಕರ್ಷಿಸುವ ಸಾಧ್ಯತೆಯನ್ನು ಸಹ ಅನ್ವೇಷಿಸುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.

ಚೆನ್ನೈನ ಬಿಡಿಯುನಂತೆ, ದಕ್ಷಿಣ ರೈಲ್ವೆಯ ಇತರ ವಿಭಾಗಗಳಲ್ಲಿ ಅಂತಹ ಐದು ಘಟಕಗಳನ್ನು ಯೋಜಿಸಲಾಗಿದೆ ಎಂದು ಅದು ಹೇಳಿದೆ. ದಕ್ಷಿಣ ರೈಲ್ವೆ ಪ್ರಮುಖ ಬಂದರುಗಳು, ಉಕ್ಕಿನ ಸ್ಥಾವರಗಳು, ಕೈಗಾರಿಕೆಗಳನ್ನು ಹೊರತುಪಡಿಸಿ ಆರು ಬಂದರುಗಳು ಮತ್ತು ಹಲವಾರು ಸಿಮೆಂಟ್ ಸ್ಥಾವರಗಳಿಗೆ ಸೇವೆ ಸಲ್ಲಿಸುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.