ETV Bharat / bharat

'ಕಲಿಯುಗದ ಕರ್ಣ'ನಿಂದ ವಿದ್ಯಾರ್ಥಿವೇತನ... ಬಡ ಮಕ್ಕಳಿಗೆ ತಾಯಿ ಹೆಸರಲ್ಲಿ ಸೋನು ಸೂದ್​​ ಸಹಾಯ!

ಈಗಾಗಲೇ ಸಾವಿರಾರು ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡಿ ಕಲಿಯುಗದ ಕರ್ಣ ಎಂಬ ಹೆಸರು ಪಡೆದುಕೊಂಡಿರುವ ನಟ ಸೋನು ಸೂದ್​ ಇದೀಗ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡಲು ಮುಂದಾಗಿದ್ದಾರೆ.

Sonu Sood
Sonu Sood
author img

By

Published : Sep 12, 2020, 5:15 PM IST

ಮುಂಬೈ: ಮಹಾಮಾರಿ ಕೊರೊನಾ ವೈರಸ್​ ಹಾಗೂ ಲಾಕ್​ಡೌನ್​​ ಸಮಯದಲ್ಲಿ ಸಾವಿರಾರು ಜನರಿಗೆ ಸಹಾಯ ಮಾಡಿ ಎಲ್ಲರಿಂದಲೂ ಮೆಚ್ಚುಗೆಗೆ ಒಳಗಾಗಿರುವ ನಟ ಸೋನು ಸೂದ್​ ಇದೀಗ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ ಹಾಕಿಕೊಂಡಿದ್ದು, ಈ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಲು ಮುಂದಾಗಿದ್ದಾರೆ.

ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್​​ನಿಂದಾಗಿ ಅನೇಕ ಬಡ ಕುಟುಂಬಗಳು ತಮ್ಮ ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ. ಜತೆಗೆ ಆನ್​ಲೈನ್​​ ತರಗತಿಗಳಿಗೆ ಹಾಜರಾಗಲು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ನಟ ಸೋನು ಸೋದ್​​​ ತಮ್ಮ ದಿವಂಗತ ತಾಯಿ ಸರೋಜ್​​ ಸೂದ್​​ ಹೆಸರಲ್ಲಿ ವಿದ್ಯಾರ್ಥಿವೇತನ ನೀಡಲು ಮುಂದಾಗಿದ್ದಾರೆ.

ಮೆಡಿಸಿನ್, ಎಂಜಿನಿಯರಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ರೊಬೊಟಿಕ್ಸ್ ಮತ್ತು ಆಟೋಮೇಷನ್, ಸೈಬರ್ ಸೆಕ್ಯೂರಿಟಿ, ಡಾಟಾ ಸೈನ್ಸ್, ಫ್ಯಾಶನ್, ಪತ್ರಿಕೋದ್ಯಮ ಮತ್ತು ಬಿಸಿನೆಸ್ ಸ್ಟಡೀಸ್ ಕೋರ್ಸ್​​ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ನಟ ಮುಂದಾಗಿದ್ದಾರೆ.

ವಾರ್ಷಿಕ ಆದಾಯ 2 ಲಕ್ಷ ರೂ ಗಿಂತಲೂ ಕಡಿಮೆ ಇರುವ ಕುಟುಂಬದ ವಿದ್ಯಾರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಆದರೆ ಅವರ ಶೈಕ್ಷಣಿಕ ದಾಖಲೆ ಉತ್ತಮ ಮಟ್ಟದಲ್ಲಿರಬೇಕು ಎಂದು ನಟ ಷರತ್ತು ವಿಧಿಸಿದ್ದಾರೆ. ಶಾಲಾ ವೆಚ್ಚ, ಹಾಸ್ಟೇಲ್​, ಆಹಾರ ಸೇರಿದಂತೆ ಎಲ್ಲ ಖರ್ಚು ತಾವು ನೋಡಿಕೊಳ್ಳುವುದಾಗಿ ಅವರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.