ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತಿಹಾರ್ ಜೈಲಿನಲ್ಲಿ ಭೇಟಿಯಾದರು.
ಕೆಲ ದಿನಗಳ ಹಿಂದೆ ಇದೇ ಜೈಲಿನಲ್ಲಿರುವ ಐಎನ್ಎಕ್ಸ್ ಮೀಡಿಯಾ ಹಗರಣ ಸಂಬಂಧ ಬಂಧಿಯಾಗಿರುವ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರನ್ನು ಸೋನಿಯಾ ಭೇಟಿ ಮಾಡಿದ್ದರು. ಆ ವೇಳೆ ಅವರು ಕೇವಲ ಚಿದು ಅವರನ್ನು ಭೇಟಿಯಾಗಲು ಮಾತ್ರ ಅನುಮತಿ ಪಡೆದಿದ್ದರು. ಆದ ಕಾರಣ ಪಕ್ಕದ ಸೆಲ್ನಲ್ಲೇ ಇದ್ದ ಡಿಕೆಶಿ ಭೇಟಿ ಸಾಧ್ಯವಾಗಿರಲಿಲ್ಲ.
ಬಳಿಕ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಲು ಅನುಮತಿ ಕೋರಿದ್ದ ಸೋನಿಯಾ, ತಿಹಾರ್ ಜೈಲು ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಡಿಕೆಶಿ ಭೇಟಿಯಾಗಲು ಅವರಿಗೆ ಜೈಲಾಧಿಕಾರಿಗಳು ಇಂದು ಅನುಮತಿ ನೀಡಿದ್ದರು. ಜೈಲು ಅಧಿಕಾರಿಗಳ ಸಮ್ಮತಿ ಮೇರೆಗೆ ಸೋನಿಯಾ ಗಾಂಧಿ, ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ವಾಪಾಸ್ ತೆರಳಿದ್ದಾರೆ.