ತಿರುವನಂತಪುರಂ: ಕೇರಳದಲ್ಲಿ ಶನಿವಾರ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಒಂದೇ ಕುಟುಂಬದ ಐವರು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ.
ತ್ರಿಶೂರ್ ಜಿಲ್ಲೆಯ ಚಲಕುಡಿಯಿಂದ ಕಾರಿನಲ್ಲಿ ಹಿಂದಿರುಗುತ್ತಿದ್ದ ಒಂದೇ ಕುಟುಂಬದ ಐವರು ಸದಸ್ಯರು ಕೊಟ್ಟಾಯಂ ಜಿಲ್ಲೆಯ ಕುರಾವಿಲಿಂಗದ ಬಳಿ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅರವತ್ತೆಂಟು ವರ್ಷದ ಲಾಟರಿ ಏಜೆಂಟ್ ಥಾಂಪಿ, ಅವರ ಪತ್ನಿ, ಸೊಸೆ, ಮೊಮ್ಮಗ, ಅವರ ಸಂಬಂಧಿ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಮತ್ತೊಂದು ಅಪಘಾತದಲ್ಲಿ ಇಂದು ಮುಂಜಾನೆ ನಿಯಂತ್ರಣ ತಪ್ಪಿದ ಲಾರಿಯೊಂದು ಆಲಪ್ಪುಳದಲ್ಲಿ ಮನೆಯೊಳಗೆ ನುಗ್ಗಿ 76 ವರ್ಷದ ಮಹಿಳೆ ಮೇಲೆ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಆಕೆಯ ಇಬ್ಬರು ಸಂಬಂಧಿಕರು ಗಾಯಗೊಂಡಿದ್ದಾರೆ.