ETV Bharat / bharat

ದೇಶದಲ್ಲಿ ಒಂದೇ ದಿನ 57 ಸಾವಿರ ಮಂದಿಗೆ ಅಂಟಿದ ಕೊರೊನಾ​... 17 ಲಕ್ಷ ಗಡಿಯತ್ತ ಸೋಂಕಿತರ ಸಂಖ್ಯೆ - ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 16,95,988 ಹಾಗೂ ಮೃತರ ಸಂಖ್ಯೆ 36,511ಕ್ಕೆ ಏರಿಕೆಯಾಗಿದೆ.

India covid
ಭಾರತದಲ್ಲಿ ಕೊರೊನಾ ಸೋಂಕಿತರು
author img

By

Published : Aug 1, 2020, 10:18 AM IST

Updated : Aug 1, 2020, 11:04 AM IST

ನವದೆಹಲಿ: ಭಾರತದಲ್ಲಿ ಕೇವಲ ಎರಡೇ ದಿನದಲ್ಲಿ ಲಕ್ಷಕ್ಕೂ ಅಧಿಕ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇದೀಗ ದೇಶದಲ್ಲಿ ಕೋವಿಡ್​ ಕೇಸ್​ಗಳ ಸಂಖ್ಯೆ 17 ಲಕ್ಷ ಗಡಿ ತಲುಪುತ್ತಿದ್ದು, ಸಾವಿನ ಸಂಖ್ಯೆ 36 ಸಾವಿರ ಗಡಿ ದಾಟಿದೆ.

ಕಳೆದ 24 ಗಂಟೆಗಳಲ್ಲಿ ಈವರೆಗೆ ಅತಿ ಹೆಚ್ಚು ಪ್ರಕರಣಗಳು ಎಂಬಂತೆ ಬರೋಬ್ಬರಿ 57,117 ಸೋಂಕಿತರು ಪತ್ತೆಯಾಗಿದ್ದು, 764 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 16,95,988 ಹಾಗೂ ಮೃತರ ಸಂಖ್ಯೆ 36,511ಕ್ಕೆ ಏರಿಕೆಯಾಗಿದೆ.

ಒಟ್ಟು ಸೋಂಕಿತರ ಪೈಕಿ 10,94,374 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಚ್​ ಆಗಿದ್ದಾರೆ. ಉಳಿದಂತೆ 5,65,103 ಕೇಸ್​​ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಜುಲೈ 31ರ ವರೆಗೆ ಒಟ್ಟು 1,93,58,659 ಮಂದಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ನಿನ್ನೆ ಒಂದೇ ದಿನ 5,25,689 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

Last Updated : Aug 1, 2020, 11:04 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.