ETV Bharat / bharat

ಕೋವಿಡ್​ ಕಾಲಘಟ್ಟ: ತುರ್ತು ಬಳಕೆಗೆ ಅವಕಾಶ ಕೇಳಿದ 'ಸೆರಂ' - ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)

ಫೈಝರ್ ಇಂಡಿಯಾ ಬಳಿಕ ಕೊರೊನಾ ಲಸಿಕೆ 'ಕೋವಿಶೀಲ್ಡ್' ತುರ್ತು ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಬಳಿ ಸೆರಂ​​ ಇನ್​​​ಸ್ಟಿಟ್ಯೂಟ್​ ಆಫ್​ ಇಂಡಿಯಾ ಅನುಮತಿ ಕೋರಿದೆ..

SII seeks emergency use nod for Covishield vaccine
ಸೆರಂ
author img

By

Published : Dec 7, 2020, 11:53 AM IST

Updated : Dec 7, 2020, 12:45 PM IST

ನವದೆಹಲಿ : ಇಂಗ್ಲೆಂಡ್​​​ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಔಷಧ ತಯಾರಿಕೆ ಸಂಸ್ಥೆ ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸುತ್ತಿರುವ ಕೋವಿಡ್-19 ಲಸಿಕೆ (ಕೋವಿಶೀಲ್ಡ್)ಯ ತುರ್ತು ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಬಳಿ ಸೆರಂ​​ ಇನ್​​​ಸ್ಟಿಟ್ಯೂಟ್​ ಆಫ್​ ಇಂಡಿಯಾ ಸಮ್ಮತಿ ಕೇಳಿ ಅರ್ಜಿ ಸಲ್ಲಿಸಿದೆ.

ಡಿಸಿಜಿಐ ಬಳಿ ಅನುಮತಿ ಕೇಳಿರುವ ಮೊದಲ ಸ್ವದೇಶಿ ಕಂಪನಿ 'ಸೆರಂ' ಆಗಿದೆ. ತುರ್ತು ಪರಿಸ್ಥಿತಿಗಳಲ್ಲಿ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಅನುಮೋದನೆ ಕೇಳುತ್ತಿರುವುದಾಗಿ ಸೆರಂ ತಿಳಿಸಿದೆ.

ಇದನ್ನೂ ಓದಿ: ಅಸ್ಟ್ರಾಜೆನೆಕಾದ ಕೊರೊನಾ ಲಸಿಕೆ ಸುರಕ್ಷಿತ, ಯಾವುದೇ ಅಡ್ಡ ಪರಿಣಾಮ​ ಇಲ್ಲ: ಸೆರಂ ಸ್ಪಷ್ಟನೆ

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕೋವಿಶೀಲ್ಡ್ ಲಸಿಕೆಯನ್ನು ಭಾರತದಲ್ಲಿ ಮಹಾರಾಷ್ಟ್ರದ ಪುಣೆಯ ಸೆರಂ ಕಂಪನಿಯು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಸಹಯೋಗದಲ್ಲಿ ಉತ್ಪಾದಿಸುತ್ತಿದೆ. ಮಾನವರ ಮೇಲೆ ಮೂರನೇ ಹಂತದ ಲಸಿಕೆ ಪ್ರಯೋಗ ನಡೆಸುತ್ತಿದೆ. ಈಗಾಗಲೇ 40 ಮಿಲಿಯನ್​ ಡೋಸ್​ಗಳನ್ನು ಸೆರಂ ತಯಾರಿಸಿದೆ.

ಇಂಗ್ಲೆಂಡ್​, ಬ್ರೆಜಿಲ್​​ ಮತ್ತು ಭಾರತದಲ್ಲಿ ನಡೆಸಿರುವ ಕ್ಲಿನಿಕಲ್ ಅಧ್ಯಯನಗಳು ಕೋವಿಶೀಲ್ಡ್ ಲಸಿಕೆಯು ಕೋವಿಡ್​ ವಿರುದ್ಧ ಹೋರಾಡಲು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಮಾಹಿತಿ ನೀಡಿವೆ.

ನಿನ್ನೆಯಷ್ಟೇ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ 'ಫೈಝರ್ ಇಂಡಿಯಾ' ಡಿಸಿಜಿಐಗೆ ಮನವಿ ಮಾಡಿತ್ತು. ಫೈಝರ್ ಹಾಗೂ ಬಯೋಎನ್​ಟೆಕ್‌ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಲಸಿಕೆ ಬಳಕೆಗೆ ಈಗಾಗಲೇ ಬ್ರಿಟನ್​ ಸರ್ಕಾರ ಒಪ್ಪಿಗೆ ನೀಡಿದೆ.

Last Updated : Dec 7, 2020, 12:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.